ಬೆಂಗಳೂರು: 20 ವರ್ಷದ ನಂತರ ಅಂದರೆ 2026ರಲ್ಲಿ ವಿಮಾನಯಾನ ಸೇವಾ ಕ್ಷೇತ್ರದಲ್ಲಿ ಭಾರತ ಇಂಗ್ಲೆಂಡ್ ದೇಶವನ್ನು ಹಿಂದಿಕ್ಕಿ ಮೂರನೇ ಸ್ಥಾನಪಡೆದುಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆ ತಿಳಿಸಿದೆ. ಸದ್ಯ ವಾರ್ಷಿಕ 2016ರ ಪ್ರಕಾರ ಜಗತ್ತಿನಲ್ಲಿ 3.8 ಬಿಲಿಯನ್ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಾರೆ. ಅದರಂತೆ ಇದೇ ಅಂಕಿ ಅಂಶವನ್ನು ಮುಂದಿನ 2035 ಕ್ಕೆ ಲೆಕ್ಕಹಾಕಿದಾಗ 7.2 ಬಿಲಿಯನ್ ಜನ ವಾಯುಸಾರಿಗೆ ಬಳಸಿಕೊಳ್ಳಲಿದ್ದಾರೆ. ಅಂದರೆ ವಾರ್ಷಿಕ 3.5 ಪ್ರತಿಷತದಷ್ಟು