Widgets Magazine

ಜಿಯೋಗೆ ಸಡ್ಡು: ಏರ್ ಟೆಲ್ ಬಂಪರ್ ಆಫರ್!

NewDelhi| Krishnaveni K| Last Modified ಶನಿವಾರ, 15 ಏಪ್ರಿಲ್ 2017 (09:04 IST)
ನವದೆಹಲಿ: ಟೆಲಿಕಾಂ ಸಂಸ್ಥೆಗಳ ಮಧ್ಯೆ ಪ್ರಬಲ ಪೈಪೋಟಿ ಆರಂಭವಾಗಿದೆ. ಆದರೆ ಇದರ ಲಾಭವಾಗುತ್ತಿರುವುದು ಗ್ರಾಹಕರಿಗೆ. ರಿಲಯನ್ಸ್ ಜಿಯೋ ಧನ್ ದನಾ ಧನ್ ಪ್ಯಾಕ್ ಘೋಷಿಸಿದ ಬೆನ್ನಲ್ಲೇ ಏರ್ ಟೆಲ್ ಬಂಪರ್ ಯೋಜನೆಯೊಂದನ್ನು ಹೊರಬಿಟ್ಟಿದೆ.

 
 
ಮೊನ್ನೆಯಷ್ಟೇ ಜಿಯೋ 309 ರೂ.ಗಳ ಡಾಟಾ ಪ್ಯಾಕ್ ಬಿಡುಗಡೆ ಮಾಡಿತ್ತು. ಅದಕ್ಕೆ ಸಡ್ಡು ಹೊಡೆಯುವಂತೆ ಏರ್ ಟೆಲ್ ತನ್ನ ಗ್ರಾಹಕರಿಗಾಗಿ ಕೇವಲ 244 ರೂ. ಬೆಲೆಯಲ್ಲಿ ಮಾಸಿಕ 70 ಜಿಬಿ 4 ಜಿ ಡಾಟಾ ಒದಗಿಸಲಿದೆ.
 
 
ಇದರ ಜತೆಗೆ ಪ್ರತಿದಿನ 300 ನಿಮಿಷಗಳ ಏರ್ ಟೆಲ್ ಟು ಏರ್ ಟೆಲ್ ಎಸ್ ಟಿಡಿ ಮತ್ತು ಸ್ಥಳೀಯ ಕರೆಗಳನ್ನು ಒದಗಿಸುತ್ತಿದೆ. ನಂತರದ ಕರೆಗಳಿಗೆ ಪ್ರತಿ ನಿಮಿಷಕ್ಕೆ 0.10 ಪೈಸೆ ದರವಿರುತ್ತದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   ಇದರಲ್ಲಿ ಇನ್ನಷ್ಟು ಓದಿ :