ಗ್ರಾಹಕರಿಗಾಗಿ 148 ರೂ.ಗಳ ವಿಶೇಷವಾದ ಪ್ಲ್ಯಾನ್ ನ್ನು ಬಿಡುಗಡೆ ಮಾಡಿದ ಏರ್ಟೆಲ್

ನವದೆಹಲಿ, ಭಾನುವಾರ, 7 ಜುಲೈ 2019 (08:31 IST)

ನವದೆಹಲಿ : ಗ್ರಾಹಕರಿಗಾಗಿ ಹೊಸ ಹೊಸ ರಿಚಾರ್ಜ್ ಆಫರ್ ಗಳನ್ನು ಬಿಡುಗಡೆ ಮಾಡುತ್ತಿದ್ದ ಏರ್ಟೆಲ್ ಇದೀಗ ತನ್ನ ಗ್ರಾಹಕರಿಗಾಗಿ 148 ರೂ.ಗಳ ವಿಶೇಷವಾದ ಪ್ಲ್ಯಾನ್ ನ್ನು ಬಿಡುಗಡೆ ಮಾಡಿದೆ.
148 ರೂ.ಗಳ ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆಗಳ ಸೌಲಭ್ಯ ಸಿಗಲಿದೆ. ಇದರೊಂದಿಗೆ 3GB ಇಂಟರ್​ನೆಟ್​ ಡೇಟಾ ಕೂಡ ದೊರೆಯಲಿದೆ. ಇದರಲ್ಲಿ ಉಚಿತ ಏರ್​ಟೆಲ್ ಟಿವಿ ಚಂದಾದಾರಿಕೆ ಕೂಡ ಗ್ರಾಹಕರಿಗೆ ದೊರೆಯಲಿದೆ. ಈ ಪ್ಲ್ಯಾನ್ 28 ದಿನಗಳ ವ್ಯಾಲಿಟಿಡಿ ಹೊಂದಿದೆ.


ಅಷ್ಟೇ ಅಲ್ಲದೆ. ಹಾಗೆಯೇ ವಿಂಕ್ ಮ್ಯೂಸಿಕ್​ ಆಯಪ್​ ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ. ಹಾಗೇ ಈ ಪ್ಲ್ಯಾನ್​ನಲ್ಲಿ ಉಚಿತ ಹಲೋ ಟ್ಯೂನ್ ಆಯ್ಕೆ ಅವಕಾಶವನ್ನು ಏರ್​ ಟೆಲ್ ತನ್ನ ಗ್ರಾಹಕರಿಗೆ ನೀಡಿದೆ. 148 ರಿಚಾರ್ಜ್​ ಪ್ಲ್ಯಾನ್​ನಲ್ಲಿ ವಿಂಕ್ ಮ್ಯೂಸಿಕ್ ಆಯಪ್​ ಮೂಲಕ 15 ಭಾಷೆಗಳಲ್ಲಿನ ಹಾಡುಗಳನ್ನು ಹಲೋ ಟ್ಯೂನ್ ಆಗಿ ಉಚಿತವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಈ ಸೌಲಭ್ಯ  28 ದಿನಗಳಿಗೆ ಮಾತ್ರ ಸಿಗಲಿದ್ದು ಬಳಿಕ ಹಲೋ ಟ್ಯೂನ್ ನವೀಕರಿಸಲು ತಿಂಗಳ ಚಾರ್ಜ್​ 30 ರೂ. ಪಾವತಿಸಬೇಕಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಯುಎಇಗೆ ಆಗಮಿಸುವ ಪ್ರವಾಸಿಗರಿಗೆ ಇವುಗಳು ಫ್ರೀಯಾಗಿ ಸಿಗಲಿದೆಯಂತೆ

ದುಬೈ : ಯಾವುದೇ ಒಂದು ಮೊಬೈಲ್, ಸಿಮ್ ಕಾರ್ಡ್ ಗಳನ್ನು ಖರೀದಿಸಲು ದಾಖಲೆಗಳನ್ನು ಕೊಡಲೇಬೇಕು. ಆದರೆ ...

news

ಬಜೆಟ್2019: ಮಧ್ಯಮ ವರ್ಗಕ್ಕೆ ಶಾಕ್ ನೀಡಿದ ಬಜೆಟ್

ನವದೆಹಲಿ: ಬಜೆಟ್ 2019: ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಪ್ರಧಾನಮಂತ್ರಿ ...

news

ಬಜೆಟ್‌2019:ಸಣ್ಣ ಉದ್ಯಮಿಗಳಿಗೆ, ರಿಟೇಲರ್‌ಗಳಿಗೆ ಪಿಂಚಣಿ ಘೋಷಣೆ

ನವದೆಹಲಿ: ವಾರ್ಷಿಕವಾಗಿ 1.5 ಕೋಟಿ ರೂಪಾಯಿಗಳಿಗಿಂತ ಕಡಿಮೆ ವಹಿವಾಟುವಿರುವ ಉದ್ಯಮಿಗಳಿಗೆ ಪಿಂಚಣಿ ಸೌಲಭ್ಯ ...

news

ವಿಶ್ವದ ಮೊದಲ ನೆವರ್‌ ಸ್ಟಾಪ್ ಲೇಸರ್ ಟ್ಯಾಂಕ್ ಪ್ರಿಂಟರ್ ಅನ್ನು ಪರಿಚಯಿಸಿದ HP

ನವದೆಹಲಿ : ಭಾರತದ ವ್ಯವಹಾರಗಳಿಗೆ ಸೂಕ್ತವಾದ ಸ್ಮಾರ್ಟ್ ಪ್ರಿಂಟಿಂಗ್ ತಂತ್ರಜ್ಞಾನವನ್ನು ನೀಡಲು ಪ್ರಿಂಟರ್ ...