Widgets Magazine

ಏರ್‌ಟೆಲ್ ಹೊಸ ಆಫರ್ ರೂ.150ಕ್ಕೆ ಮಂತ್ಲಿ ಪ್ಲಾನ್!

New Delhi| Rajendra| Last Modified ಬುಧವಾರ, 8 ಮಾರ್ಚ್ 2017 (21:54 IST)
ರಿಲಯನ್ಸ್ ಜಿಯೋ ಸ್ಪರ್ಧೆಯನ್ನು ಎದುರಿಸಲು ಏರ್‌ಟೆಲ್ ಹೊಸ ಸಾಹಸಕ್ಕೆ ಕೈಹಾಕುತ್ತಿದೆ. ಈಗಾಗಲೆ ರೂ.345ರ ಪ್ಯಾಕ್‍ನ್ನು ಬಿಟ್ಟಿದ್ದು ಪ್ರೀಪೇಯ್ಡ್ ಗ್ರಾಹಕರಿಗೆ ಅನಿಯಮಿತ ಕರೆಗಳೊಂದಿಗೆ ದಿನಕ್ಕೆ 1ಜಿಬಿ ಡಾಟಾ ನೀಡುತ್ತಿದೆ. ಆದರೆ ಈ ಬಾರಿ ಪೋಸ್ಟ್ ಪೇಯ್ಡ್ ಸೇವೆಗಳ ಮೇಲೆ ದೃಷ್ಟಿಹರಿಸಿದೆ.

ಪೋಸ್ಟ್ ಪೇಯ್ಡ್ ಗ್ರಾಹಕರಿಗಾಗಿ ಒಂದು ಭಿನ್ನ ಪ್ಲಾನ್ ತರಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ರೂ.150ಕ್ಕೆ ಹೊಸ ಸೇವೆ ಕೊಡಲು ಮುಂದಾಗಿದೆ. ಕೇವಲ ರೂ.150ಕ್ಕೆ ದಿನಕ್ಕೆ 1 ಜಿಬಿ ಡಾಟಾ 28 ದಿನಗಳ ವ್ಯಾಲಿಡಿಟಿಯೊಂದಿಗೆ ಕೊಡಲು ಏರ್‌‍ಟೆಲ್ ಯೋಜನೆ ರೂಪಿಸಿದೆ.

ಈ 1ಜಿಬಿ ಡಾಟಾದಲ್ಲಿ 500 ಎಂಬಿ ಬೆಳಗ್ಗೆ, 500 ಎಂಬಿ ರಾತ್ರಿ 12ರ ಬಳಿಕ ಉಪಯೋಗಿಸಿಕೊಳ್ಳುವಂತೆ ಹೊಸ ಯೋಜನೆಯನ್ನು ಪರಿಚಯಿಸಲಿದೆ. ಜಿಯೋ ಗ್ರಾಹಕರು ಹೆಚ್ಚಾಗಿ ಡಾಟಾ ಬಯಸುತ್ತಿದ್ದಾರೆ ಎಂದು ಏರ್‌ಟೆಲ್ ಭಾವಿಸಿದೆ. ವಾಯ್ಸ್ ಕರೆಗಳಿಗೆ ಸಂಬಂಧ ಇಲ್ಲದಂತೆ ರೂ.150ಕ್ಕೆ ಮಂತ್ಲಿ ಪ್ಲಾನ್ ಕೊಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :