ಆಸ್ತಿ ಖರೀದಿಗೆ 20 ಸಾವಿರಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸುವ ಮುನ್ನ ಎಚ್ಚರ. ಯಾಕೆ ಗೊತ್ತಾ?

ನವದೆಹಲಿ, ಮಂಗಳವಾರ, 22 ಜನವರಿ 2019 (09:08 IST)

ನವದೆಹಲಿ : ಆಸ್ತಿ ಖರೀದಿಗೆ 20 ಸಾವಿರಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸಿದವರ  ವಿರುದ್ಧ ದೆಹಲಿಯ ತೆರಿಗೆ ಇಲಾಖೆ ಅಧಿಕಾರಿಗಳು ನೊಟೀಸ್ ಜಾರಿ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.


ಆಸ್ತಿಗಳ ಖರೀದಿಗೆ ಬಳಕೆಯಾಗುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಯಲು ಆದಾಯ ತೆರಿಗೆ ಇಲಾಖೆ ನಗದು ವಹಿವಾಟಿಗೆ ಮಿತಿ ವಿಧಿಸಿದೆ. ಆದಕಾರಣ ತೆರಿಗೆ ಇಲಾಖೆಯವರು ಆಸ್ತಿ ಖರೀದಿಗೆ 20 ಸಾವಿರಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸಿದವರ ಮಾಹಿತಿ ಕಲೆ ಹಾಕುತ್ತಿದ್ದು,  2015-2018 ರಲ್ಲಿ ನಡೆದ ಆಸ್ತಿ ನೋಂದಣಿದಾರರ ಮಾಹಿತಿಯನ್ನು ದೆಹಲಿಯ 21 ಉಪ ರಿಜಿಸ್ಟ್ರಾರ್ ಕಚೇರಿಯಿಂದ ಪಡೆಯುತ್ತಿದ್ದಾರೆ.


ಜೂನ್ 1, 2015 ರಲ್ಲಿ ಜಾರಿಗೆ ಬಂದ ಹೊಸ ನಿಯಮದ ಪ್ರಕಾರ, ಕೃಷಿ ಭೂಮಿ ಸೇರಿದಂತೆ ಯಾವುದೇ ಆಸ್ತಿ ಖರೀದಿ ಚೆಕ್, RTGS ಮತ್ತು NEFT ಮೂಲಕವೇ ನಡೆಯಬೇಕು. ಹಾಗೇ  20 ಸಾವಿರದೊಳಗೆ ವ್ಯವಹಾರ ಮಾಡಬೇಕು. ಅದಕ್ಕಿಂತ ಹೆಚ್ಚು ನಗದು ವಹಿವಾಟು ನಡೆದರೆ ತೆರಿಗೆ ಇಲಾಖೆ ಅಗತ್ಯ ಕ್ರಮಕೈಗೊಳ್ಳಲಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಆಂಡ್ರಾಯ್ಡ್ ಬಳಕೆದಾರರಿಗಾಗಿ ಜಿಯೋ ಬಿಡುಗಡೆ ಮಾಡಿದೆ ಈ ಹೊಸ ಆಪ್

ನವದೆಹಲಿ : ರಿಲಾಯನ್ಸ್ ಜಿಯೋ ಆಂಡ್ರಾಯ್ಡ್ ಬಳಕೆದಾರರಿಗಾಗಿ ಜಿಯೋ ಬ್ರೌಸರ್ ಆಪ್ ಎಂಬ ಹೊಸ ಆಪ್ ವೊಂದನ್ನು ...

news

ನಾಣ್ಯಗಳ ಪುನರ್ ವಿನ್ಯಾಸಕ್ಕೆ ಸರ್ಕಾರ ಚಿಂತನೆ: ಶೀಘ್ರದಲ್ಲಿ 20 ರೂ.ನಾಣ್ಯ ಬಿಡುಗಡೆ

ಇಪ್ಪತ್ತು ರೂಪಾಯಿ ನಾಣ್ಯ ತರಬೇಕೆ ಅಥವಾ ನೋಟು ತರಬೇಕೆ ? ಏನು ಬಿಡುಗಡೆಗೊಳಿಸಬೇಕು? ದೀರ್ಘವಾದ ಚರ್ಚೆಯ ...

news

399 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದ ಬಿ.ಎಸ್‌.ಎನ್‌.ಎಲ್

ನವದೆಹಲಿ : ಜಿಯೋದ 399 ಪ್ಲಾನ್ ಗೆ ಟಕ್ಕರ್ ನೀಡಲು ಬಿ.ಎಸ್‌.ಎನ್‌.ಎಲ್. ತನ್ನ 399 ರೂಪಾಯಿ ಪ್ಲಾನ್ ನಲ್ಲಿ ...

news

ಅಟಲ್ ಪೆನ್ಷನ್ ಯೋಜನೆ (ಎಪಿಐ): ಕೇವಲ 210 ರೂ ತಿಂಗಳ ಹೂಡಿಕೆಯೊಂದಿಗೆ 60 ಸಾವಿರ ಪಿಂಚಣಿ

ಕಳೆದ 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಟಲ್ ಪಿಂಚಣಿ ಯೋಜನೆ (ಎಪಿವೈ)ಯನ್ನು ...