Widgets Magazine

ಎಲ್ಲಾ ಸರ್ಕಾರಿ ಬ್ಯಾಂಕುಗಳು ಮಾರ್ಚ್ 31 ಭಾನುವಾರದಂದು ಕಾರ್ಯ ನಿರ್ವಹಿಸಲಿದೆ

ನವದೆಹಲಿ| pavithra| Last Modified ಶನಿವಾರ, 30 ಮಾರ್ಚ್ 2019 (10:07 IST)
ನವದೆಹಲಿ : ಸರ್ಕಾರಿ ವಹಿವಾಟು ನಡೆಸುವ ಎಲ್ಲ ಬ್ಯಾಂಕ್ ಶಾಖೆಗಳಿಗೆ ಭಾನುವಾರದಂದು ರಜೆ ಇರುತ್ತದೆ. ಆದರೆ ಈ ವರ್ಷ ಮಾರ್ಚ್ 31 ಭಾನುವಾರದಂದು ಎಲ್ಲಾ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ.

ಹೌದು ಹಣಕಾಸು ವರ್ಷದ ಕೊನೆಯ ದಿನ ಮಾರ್ಚ್ 31 ಭಾನುವಾರದಂದು ಬಂದಿರುವ ಹಿನ್ನಲೆಯಲ್ಲಿ ಬ್ಯಾಂಕುಗಳು ಭಾನುವಾರವೂ ಕೆಲಸ ಮಾಡಲಿವೆ ಎಂದು ಆರ್ಬಿಐ ಹೇಳಿದೆ. ಮಾರ್ಚ್ 31 ರಂದು ಸರ್ಕಾರಿ ಪಾವತಿ ಹಾಗೂ ರಸೀದಿಗಾಗಿ ಎಲ್ಲ ಶಾಖೆಗಳನ್ನು ತೆರೆದಿಡಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿರುವುದರಿಂದ, ಎಲ್ಲ ಬ್ಯಾಂಕ್ ಗಳು ಭಾನುವಾರ ಕೆಲಸ ಮಾಡಬೇಕೆಂದು ಆರ್ಬಿಐ ಸೂಚನೆ ನೀಡುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಿದೆ.


ಸರ್ಕಾರಿ ವಹಿವಾಟು ನಡೆಸುವ ಎಲ್ಲ ಬ್ಯಾಂಕುಗಳು ಮಾರ್ಚ್ 30, ರಂದು ರಾತ್ರಿ 8 ಗಂಟೆಯವರೆಗೆ ಹಾಗೂ ಮಾರ್ಚ್ 31 ರಂದು ಸಂಜೆ ಆರು ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ಏಪ್ರಿಲ್ 1 ರಂದು ಹಣಕಾಸು ವರ್ಷ ಬದಲಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್
ಡೌನ್
ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :