ನವದೆಹಲಿ : ದಸರಾ ದೀಪಾವಳಿ ಹಬ್ಬಗಳಿಗೆ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿರುವ ಇ-ಕಾಮರ್ಸ್ ಕಂಪೆನಿಗಳಾದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳಿಗೆ ಇದೀಗ ಸಂಕಷ್ಟ ಒಂದು ಎದುರಾಗಿದೆ. ಹೌದು. ಹಬ್ಬದ ಮಾರಾಟದ ಸಂದರ್ಭದಲ್ಲಿ ಇ-ಕಾಮರ್ಸ್ ಕಂಪೆನಿಗಳು ವಿದೇಶಿ ನೇರ ಹೂಡಿಕೆ ನೀತಿಯನ್ನು ಉಲ್ಲಂಘಿಸುವುದಲ್ಲದೇ, ಸರಿಯಾದ ವ್ಯಾಪಾರ ನೀತಿಯನ್ನು ಅನುಸರಿಸುತ್ತಿಲ್ಲ ಎಂದು ವ್ಯಾಪಾರಿಗಳ ಸಂಘ ಸಿಎಐಟಿಗೆ ದೂರು ನೀಡಿವೆ. ಆದಕಾರಣ ಆನ್ ಲೈನ್ ವ್ಯಾಪಾರ ಕಂಪೆನಿಗಳು ಸರಕುಗಳ ದರ ಪಟ್ಟಿ, ಇವುಗಳಿಗೆ