ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ ನ ಮತ್ತೆ ಪ್ರಾರಂಭಿಸಿದ ಅಮೆಜಾನ್

ನವದೆಹಲಿ, ಮಂಗಳವಾರ, 8 ಅಕ್ಟೋಬರ್ 2019 (07:58 IST)

ನವದೆಹಲಿ : ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಅಮೆಜಾನ್​ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ ನ್ನು ಮತ್ತೆ ಪ್ರಾರಂಭಿಸಲು ಮುಂದಾಗಿದ್ದು, ವಸ್ತುಗಳ ಮೇಲೆ ಭಾರೀ ಡಿಸ್ಕೌಂಟ್​  ನೀಡುತ್ತಿದೆ.
ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಸೆಪ್ಟಂಬರ್ 29 ರಿಂದ ಅಕ್ಟೋಬರ್ 4ರವರೆಗೆ ಗ್ರೇಟ್​ ಇಂಡಿಯನ್​ ಫೆಸ್ಟಿವಲ್ ​ ಸೇಲ್​ ನ್ನುನಡೆಸಿದ ಅಮೆಜಾನ್ ಇದೀಗ  ತಿಂಗಳಾಂತ್ಯದಲ್ಲಿ ದೀಪಾವಳಿ ಹಬ್ಬ ಇರುವುದರಿಂದ ಇದೀಗ ಮತ್ತೆ ಅಕ್ಟೋಬರ್​ 13-17ರವರೆಗೆ ಈ ಸೇಲ್​ ನಡೆಸಲು ನಿರ್ಧಾರ ಮಾಡಿದೆ.


ಈ ಬಾರಿ ಐಸಿಐಸಿಐ ಬ್ಯಾಂಕ್​ ಕ್ರೆಡಿಟ್​ ಹಾಗೂ ಡೆಬಿಟ್​ ಕಾರ್ಡ್​​ ಬಳಕೆದಾರರಿಗೆ ಹೆಚ್ಚುವರಿ ರಿಯಾಯತಿ ಸಿಗಲಿದೆ. ಡೆಬಿಟ್​ ಕಾರ್ಡ್​ಗಳ ಮೇಲೆ ಯಾವುದೇ ಇಎಂಐ ಇರುವುದಿಲ್ಲ. ಪ್ರೈಮ್​ ಸದಸ್ಯರಿಗೆ ಅಕ್ಟೋಬರ್​ 12ರಿಂದಲೇ ಸೇಲ್​ ಆರಂಭಗೊಳ್ಳಲಿದೆ. ಒನ್​ಪ್ಲಸ್​ 7ಟಿ, ಸ್ಯಾಮ್​ಸಂಗ್​ ಎಂ30ಎಸ್​​ ಮತ್ತು ವಿವೋ ಯು10 ಸೇರಿ ಅನೇಕ ಮೊಬೈಲ್ ​ಗಳ ಮೇಲೆ ಶೇ.40, ಟಿವಿ ಹಾಗೂ ಮನೆ ಬಳಕೆ ವಸ್ತುಗಳ ಬೆಲೆ ಮೇಲೆ ಶೇ.60 ರಿಯಾಯಿತಿ ಸಿಗಲಿದೆ. ಇದರ ಜೊತೆಗೆ ಇನ್ನೂ ಹಲವು ವಸ್ತುಗಳ ಮೇಲೆ ಭಾರೀ ಡಿಸ್ಕೌಂಟ್​ ಸಿಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಆ್ಯಪಲ್​ ಸಂಸ್ಥೆಯ ಈ ಫೋನ್ ಗಳಲ್ಲಿ ಸಮಸ್ಯೆ ಕಂಡುಬಂದರೆ ಉಚಿತ ಸರ್ವೀಸ್​ ಮಾಡಿಕೊಡಲಾಗುವುದು

ನವದೆಹಲಿ : ಪ್ರತಿಷ್ಠಿತ ಆ್ಯಪಲ್​ ​ ಸಂಸ್ಥೆಯ ಕೆಲವು ಫೋನ್‌ಗಳು ಸರಿಯಾಗಿ ಕೆಲಸ ಮಾಡದೇ ಇರುವ ಕಾರಣ ಉಚಿತ ...

news

ದಸರಾ, ದೀಪಾವಳಿಗೆ ಜಿಯೋ ಕಡೆಯಿಂದ ಬಂಪರ್ ಆಫರ್

ನವದೆಹಲಿ : ದಸರಾ, ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಜಿಯೋ ಬಂಪರ್ ಆಫರವೊಂದನ್ನು ಘೋಷಿಸಿದ್ದು, ತನ್ನ 4ಜಿ ...

news

ಟೋಲ್ ಪಾವತಿಸಲು ಹೊಸ ವ್ಯವಸ್ಥೆ ಜಾರಿಗೊಳಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಚೆನ್ನೈ : ಟೋಲ್​ ಬೂತ್​ ನಲ್ಲಿ ಡಿಜಿಟಲ್​ ಪಾವತಿಯನ್ನು ಜಾರಿಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ...

news

ಫೇಸ್ ಬುಕ್ ಪರಿಚಯಿಸಲಿದೆ ಈ ಹೊಸ ಆಯ್ಕೆ

ನವದೆಹಲಿ : ಫೇಸ್​ ಬುಕ್​ನಲ್ಲಿ ಹಾಕುವ ಪೋಸ್ಟ್​-ಫೋಟೋಗಳಿಗೆ ಬರುವ ಕಮೆಂಟ್ಸ್, ಲೈಕ್ಸ್ ಗಳನ್ನು ಮರೆ ಮಾಚಲು ...