ನವದೆಹಲಿ : ಫ್ಲಿಪ್ಕಾರ್ಟ್ ಕಂಪನಿಯಂತೆಯೇ ಅಮೆಜಾನ್ ಸಹ ತನ್ನ ಹಬ್ಬದ ಮಾರಾಟ ಮೇಳದ ದಿನಾಂಕ ಬದಲಿಸಿದ್ದು, ಅಕ್ಟೋಬರ್ 3ರಿಂದಲೇ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆರಂಭಿಸುವುದಾಗಿ ಘೋಷಿಸಿದೆ. ಎರಡೂ ಕಂಪನಿಗಳ ಮಾರಾಟ ಮೇಳವು ಒಂದೇ ದಿನ ಆರಂಭವಾಗಲಿದೆ. ಕಳೆದ ವರ್ಷದಂತೆಯೇ ಈ ಬಾರಿಯೂ ಸ್ಪರ್ಧೆಯು ತೀವ್ರವಾಗಿರುವ ನಿರೀಕ್ಷೆ ಇದೆ. ಫ್ಲಿಪ್ಕಾರ್ಟ್ನ ಬಿಗ್ ಬಿಲಿಯನ್ ಡೇಸ್ ಮಾರಾಟವು ಎಂಟು ದಿನಗಳದ್ದಾಗಿದ್ದರೆ, ಅಮೆಜಾನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟವು ಒಂದು ತಿಂಗಳವರೆಗೆ ನಡೆಯಲಿದೆ.