ಬೆಂಗಳೂರು: ಏರ್ ಟೆಲ್ ತನ್ನ ಪೋಸ್ಟ್ ಪೇಯ್ಡ್ 399ರೂ ಯೋಜನೆಯನ್ನು ಪರಿಷ್ಕರಿಸಿದೆ. ಈ ಮೂಲಕ ಗ್ರಾಹಕರಿಗೆ ಹೆಚ್ಚುವರಿ ಡೇಟಾ ನೀಡಲಿದೆ. ಏರ್ ಟೆಲ್ ನ ಈ ಯೋಜನೆಯಂತೆ 399 ರೂಪಾಯಿ ಪೋಸ್ಟ್ ಪೇಯ್ಡ್ ನಲ್ಲಿ ಗ್ರಾಹಕರಿಗೆ ಹೆಚ್ಚುವರಿ 20 ಜಿಬಿ ಡೇಟಾ, ಜತೆಗೆ 100 ಎಸ್ಎಂಎಸ್ ಪ್ರತಿದಿನ ಸಿಗಲಿದೆ. ಗ್ರಾಹಕರು ಏರ್ ಟೆಲ್ ನ ಈ 399 ರೂ ಯೋಜನೆಯ ಮೂಲಕ ವರ್ಷವಿಡಿ 20 ಜಿಬಿ ಹೆಚ್ಚುವರಿ ಡೇಟಾ ಪಡೆದುಕೊಳ್ಳಬಹುದಾಗಿದೆ.