Widgets Magazine

ರಫ್ತುದಾರ ಸಂಸ್ಥೆಗಳ ವಿರುದ್ಧ ದೂರು ನೀಡಿದ ಬಾಬಾ ರಾಮದೇವ್ ಪತಂಜಲಿ ಕಂಪೆನಿ

ನವದೆಹಲಿ| pavithra| Last Updated: ಶನಿವಾರ, 9 ಮಾರ್ಚ್ 2019 (07:04 IST)
ನವದೆಹಲಿ : ಬಾಬಾ ರಾಮದೇವ್ ಅವರ ಕಂಪೆನಿ ತಮ್ಮ ಪತಂಜಲಿ ಆಯುರ್ವೇದ ಉತ್ಪನ್ನಗಳ ಬ್ರ್ಯಾಂಡ್ ನ್ನು ದುರ್ಬಳಕೆ ಮಾಡುತ್ತಿರುವ ಹಿನ್ನಲೆಯಲ್ಲಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.


ಎಫ್‌ಎಂಸಿಜಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಪತಂಜಲಿ ಸಂಸ್ಥೆಯಲ್ಲಿ ಟೂತ್ ಪೇಸ್ಟ್, ಶಾಂಪೂ, ಸೌಂದರ್ಯವರ್ಧಕಗಳು, ಸಂಸ್ಕರಿತ ಆಹಾರ ಉತ್ಪನ್ನಗಳು, ನೂಡಲ್ಸ್, ಕಾರ್ನ್ ಫ್ಲೇಕ್ಸ್ ಎಲ್ಲವೂ ಲಭ್ಯವಾಗುತ್ತಿದ್ದು, ಸರಿ ಸುಮಾರು 10,500 ಕೋಟಿ ರು ಮೌಲ್ಯ ಹೊಂದಿದೆ.


ಆದರೆ
ಪತಂಜಲಿ ಉತ್ಪನ್ನಗಳನ್ನು ರಪ್ತು ಮಾಡುತ್ತಿದ್ದ 13 ರಫ್ತುದಾರರ ಸಂಸ್ಥೆಗಳು ಭಾರತದಲ್ಲಿ ಮಾತ್ರ ಮಾರಾಟ ಮಾಡಬಲ್ಲ ಉತ್ಪನ್ನಗಳನ್ನು ರೀ ಪ್ಯಾಕ್ ಮಾಡಿ ಮಧ್ಯಪ್ರಾಚ್ಯ, ಕೆನಡಾ ಹಾಗೂ ಆಸ್ಟ್ರೇಲಿಯಾಕ್ಕೆ ಅಕ್ರಮವಾಗಿ ರಫ್ತು ಮಾಡಿ ಲಾಭ ಮಾಡುತ್ತಿದೆ. ಈ ವಿಚಾರ ತಿಳಿದ ಪತಂಜಲಿ ಅಯುರ್ವೇದ ಸಂಸ್ಥೆಗೆ 13 ರಫ್ತುದಾರರ ಸಂಸ್ಥೆಗಳ ವಿರುದ್ಧ ದೂರು ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :