ಪತಂಜಲಿ ಸಂಸ್ಥೆಯಿಂದ ಫುಡ್‌ಪಾರ್ಕ್ ಸ್ಥಾಪನೆಗಾಗಿ 1600 ಕೋಟಿ ಹೂಡಿಕೆ

ನವದೆಹಲಿ| Rajesh patil| Last Modified ಸೋಮವಾರ, 26 ಸೆಪ್ಟಂಬರ್ 2016 (13:52 IST)
ಯೋಗ ಗುರು ಬಾಬಾ ರಾಮದೇವ್ ಅವರ ಸಂಸ್ಥೆ ನೋಯ್ಡಾದಲ್ಲಿ 1600 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಫುಡ್‌ಪಾರ್ಕ್ ಸ್ಥಾಪಿಸಲು ನಿರ್ಧರಿಸಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಜಾಗತಿಕ ಮತ್ತು ದೇಶಿಯ ಬೇಡಿಕೆಯನ್ನು ಈಡೇರಿಸಲು ಉತ್ತರಪ್ರದೇಶದ ನೋಯ್ಡಾ ಪ್ರದೇಶದಲ್ಲಿ ಫುಡ್‌ಪಾರ್ಕ್ ಸ್ಥಾಪಿಸಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.


ಪತಂಜಲಿ ಆಯುರ್ವೇದ ಸಂಸ್ಥೆ ಶೀಘ್ರದಲ್ಲಿ 1600 ಕೋಟಿ ರೂಪಾಯಿ ಹೂಡಿಕೆ ಮಾಡುವ ಕುರಿತಂತೆ ಘೋಷಿಸಲಿದೆ. ಬಹುತೇಕ ಎಲ್ಲಾ ವಿಷಯಗಳು ಅಂತಿಮಗೊಂಡಿವೆ ಎಂದು ಉತ್ತರಪ್ರದೇಶದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.


ಉತ್ತರಪ್ರದೇಶದ ಸರಕಾರ ಹೂಡಿಕೆ ಕುರಿತಂತೆ ಪ್ರಾಮಾಣಿಕತೆ ಮತ್ತು ಪಾರದರ್ಶಕ ನಿಲುವು ಅಳಡಿಸಿದೆ. ಕೈಗಾರಿಕೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಉದ್ಯೋಗ ಸೃಷ್ಟಿಗೆ ಅನುಕೂಲವಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ನಂತರ ಪತಂಜಲಿ ಸಂಸ್ಥೆ ಹೂಡಿಕೆ ಕುರಿತಂತೆ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಇದರಲ್ಲಿ ಇನ್ನಷ್ಟು ಓದಿ :