ನವದೆಹಲಿ : ಹರಿದ ಹಾಗೂ ಬರಹವಿರುವ ನೋಟುಗಳನ್ನು ಬ್ಯಾಂಕ್ ಗಳು ಸ್ವೀಕರಿಸುವುದಾಗಿ ರಿಸರ್ವ್ ಬ್ಯಾಂಕ್ ತಿಳಿಸಿತ್ತು. ಆದರೆ ಕೆಲವೊಂದು ನೋಟುಗಳನ್ನು ಬ್ಯಾಂಕ್ ಕೂಡ ಸ್ವೀಕರಿಸುವುದಿಲ್ಲ ಎಂಬುದಾಗಿ ತಿಳಿಸಿದೆ. ಹೌದು. ನಿಮ್ಮ ಬಳಿ ಬಣ್ಣ ತಾಗಿದ ಅಥವಾ ಸ್ವಲ್ಪ ಹರಿದ ನೋಟುಗಳಿದ್ದರೆ ಅದನ್ನು ಬ್ಯಾಂಕ್ ಗೆ ನೀಡಬಹುದಾಗಿದ್ದು, ಎಲ್ಲ ಬ್ಯಾಂಕುಗಳು ಇಂಥ ನೋಟುಗಳನ್ನು ತೆಗೆದುಕೊಳ್ಳುತ್ತವೆ ಎಂದು ರಿಸರ್ವ್ ಬ್ಯಾಂಕ್ ಈ ಹಿಂದೆ ತಿಳಿಸಿತ್ತು. ಆದರೆ ಉದ್ದೇಶಪೂರ್ವಕವಾಗಿ ನೋಟನ್ನು ಹಾಳು ಮಾಡಬೇಡಿ ಎಂದು