ಬೆಂಗಳೂರು: ಟೊಮೆಟೊ ನಮ್ಮ ಪ್ರತಿ ನಿತ್ಯದ ಅಡುಗೆಗೆ ಬೇಕೇ ಬೇಕು. ಆದರೆ ಇನ್ನು ಕಿಲೋಗಟ್ಟಲೆ ಟೊಮೆಟೊ ಖರೀದಿಸುವ ಮೊದಲು ದರ ಕೇಳಿ ನೋಡಿ. ಹೌದು. ಟೊಮೆಟೊ ಮಾರಾಟಗಾರರಿಗೆ ಸಿಹಿಯಾಗಿದ್ದರೆ ಗ್ರಾಹಕರಿಗೆ ಖಾರವಾಗಿದೆ. ಟೊಮೆಟೋ ದರ ಗಣನೀಯವಾಗಿ ಏರಿಕೆಯಾಗಿದೆ. ಕೆ.ಜಿ. ಗೆ ಹದಿನೈದೋ ಇಪ್ಪತ್ತೋ ರೂ. ಒಳಗೆ ಸಿಗುತ್ತಿದ್ದ ಟೊಮೆಟೋ ಇದೀಗ 40 ರೂ.ಗೆ ಏರಿಕೆಯಾಗಿದೆ.ಬೆಲೆಯಿಲ್ಲದೇ ಕಂಗೆಟ್ಟಿದ ವ್ಯಾಪಾರಿಗಳು ಖುಷ್ ಆಗಿದ್ದರೆ, ಬೆಳ್ಳಂ ಬೆಳಿಗ್ಗೆ ಟೊಮೆಟೋ ಖರೀದಿಗೆಂದು ಬಂದ ಗ್ರಾಹಕರು