ಭಾರತದ ಐಟಿ ರಾಜಧಾನಿ, ಬೆಂಗಳೂರು, ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈ ಮತ್ತು ನವದೆಹಲಿ ಈ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದಿವೆ. ಸೋಮವಾರ ಬಿಡುಗಡೆಯಾದ ಹ್ಯುರುನ್ ಇಂಡಿಯಾ ರಿಚ್ ಲಿಸ್ಟ್ 2017 ಪ್ರಕಾರ. ಬೆಂಗಳೂರಿನ 51 ವ್ಯಕ್ತಿಗಳ ಆಸ್ತಿಯ ನಿವ್ವಳ ಮೌಲ್ಯ ಕನಿಷ್ಠ 1,000 ಕೋಟಿ ರೂಪಾಯಿಗಳಾಗಿವೆ, ಈ ಪಟ್ಟಿಯಲ್ಲಿ ಬೆಂಗಳೂರಿನ 23 ಹೊಸ ಮುಖಗಳಿವೆ. 182 ಶ್ರೀಮಂತ ಉದ್ಯಮಿಗಳನ್ನು ಹೊಂದುವ ಮೂಲಕ ಮುಂಬೈ ಅಗ್ರಸ್ಥಾನವನ್ನು ಪಡೆದಿದೆ.