ದೀಪಾವಳಿಗೆ ಬಿಎಸ್ ಎನ್ ಎಲ್ ನಿಂದ ಗ್ರಾಹಕರಿಗೆ ಭರ್ಜರಿ ಆಫರ್

ನವದೆಹಲಿ| pavithra| Last Modified ಸೋಮವಾರ, 28 ಅಕ್ಟೋಬರ್ 2019 (05:54 IST)
ನವದೆಹಲಿ : ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಗ್ರಾಹಕರನ್ನು ಸೆಳೆಯಲು ದೀಪಾವಳಿ ಹಬ್ಬಕ್ಕೆ ಭರ್ಜರಿ ಆಫರ್ ವೊಂದನ್ನು ನೀಡಿದೆ.ಅಕ್ಟೋಬರ್ 27, 28 ರಂದು ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಲ್ಯಾಂಡ್ ಲೈನ್ ಮತ್ತು ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಅನಿಯಮಿತ ಉಚಿತ ಕರೆ ಸೌಲಭ್ಯವನ್ನು ನೀಡಿದ್ದು, ಈ ಬಳಕೆದಾರರು ಯಾವುದೇ  ಲ್ಯಾಂಡ್ ಲೈನ್ ಅಥವಾ ಮೊಬೈಲ್ ಗಳಿಗೆ ಉಚಿತವಾಗಿ ಕರೆ ಮಾಡಬಹುದಾಗಿದೆ.

 

ಹಾಗೇ  ಬಿಎಸ್ ಎನ್ ಎಲ್ ನ ರೂ.429, ರೂ.485, ಮತ್ತು ರೂ. 666 ಪ್ಲಾನ್ ಗಳು ಉಚಿತ ವಾಯಿಸ್ ಕಾಲ್ ಸೌಲಭ್ಯವನ್ನು ಹೊಂದಿದ್ದು, ಬಿಎಸ್ ಎನ್ ಎಲ್ ನೊಂದಿಗೆ ಎಂಟಿಎನ್ ಎಲ್ ವಿಲೀನಗೊಳ್ಳುತ್ತಿರುವ ಕಾರಣದಿಂದ ಎಂಟಿಎನ್ ಎಲ್ ಗ್ರಾಹರಿಗೂ ಈ ಸೌಲಭ್ಯ ಸಿಗಲಿದೆ.
 
ಇದರಲ್ಲಿ ಇನ್ನಷ್ಟು ಓದಿ :