Widgets Magazine

ಬಿಜೆಪಿ ನೀರವ್ ಮೋದಿ, ಲಲಿತ್ ಮೋದಿ, ಮಲ್ಯ, ಮೋದಿಯಂತ ಭ್ರಷ್ಟರನ್ನು ನೀಡಿದೆ-ಸಿ.ಎಂ. ಇಬ್ರಾಹಿಂ

ಹಾಸನ| pavithra| Last Updated: ಸೋಮವಾರ, 8 ಏಪ್ರಿಲ್ 2019 (09:44 IST)
: ಸಿ.ಎಂ.ಇಬ್ರಾಹಿಂ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ದೇವೇಗೌಡರ ಜೊತೆ ಹೋಲಿಕೆ ಮಾಡಿ ವಾಗ್ದಾಳಿ ನಡೆಸಿದ್ದಾರೆ.


ಹಾಸನದಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಸಿ.ಎಂ. ಇಬ್ರಾಹಿಂ, ಮೋದಿ 56 ಇಂಚಿನ ಎದೆ ಇದೆ ಎಂದು ಹೇಳುತ್ತಾರೆ. ಆದರೆ ಅದರಲ್ಲಿ ಕರಣೆಯಿಲ್ಲ. ಪ್ರಧಾನಿ ಮೋದಿ ಕಲಿಯುಗದ ರಾವಣ.
ಮೋದಿಯನ್ನು ಟೀಕೆ ಮಾಡಿದ ಕೂಡಲೇ ದೇಶ ವಿರೋಧಿ ಎಂದು ಬಿಂಬಿಸುತ್ತಾರೆ ಎಂದು ಹೇಳಿದ್ದಾರೆ.


ಹಾಗೇ ಮೋದಿಯನ್ನು ದೇವೇಗೌಡರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಮೋದಿ ಧರಿಸುವ ಸೂಟ್ 10 ಲಕ್ಷ. ದೇವೇಗೌಡರು ಧರಿಸುವ ಬಟ್ಟೆ 350 ರೂ.ಮೋದಿ ಊಟ ಮಾಡೋಕೆ ಲಕ್ಷ ಲಕ್ಷ ಹಣ ವೆಚ್ಚ ಮಾಡುತ್ತಾರೆ. ದೇವೇಗೌಡರು ಉಪ್ಪುಸಾರು, ಅನ್ನ ಮುದ್ದೆ ತಿಂತಾರೆ, ಮೋದಿಗೆ ದೇವೇಗೌಡರಿಗೆ ಹೋಲಿಕೆ ಎಲ್ಲಿ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಈ ನಾಡಿ ಧೀಮಂತ ನಾಯಕರನ್ನು ಕೊಟ್ಟಿದೆ,ಬಿಜೆಪಿ ನೀರವ್ ಮೋದಿ, ಲಲಿತ್ ಮೋದಿ,ಮಲ್ಯ, ಈಗ ಮೋದಿಯಂತ ಭ್ರಷ್ಟರನ್ನು ನೀಡಿದೆ ಎಂದು ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :