Widgets Magazine

ನಿಮ್ಮ ಬಿಎಸ್ಎನ್ಎಲ್ ನಂಬರ್ ಗೆ ಆಧಾರ್ ಲಿಂಕ್ ಆಗಿದೆಯೇ? ಪತ್ತೆ ಹಚ್ಚುವುದು ಹೇಗೆ ಗೊತ್ತಾ?

ನವದೆಹಲಿ| Krishnaveni| Last Modified ಮಂಗಳವಾರ, 16 ಜನವರಿ 2018 (10:24 IST)
ನವದೆಹಲಿ: ಮೊಬೈಲ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಿಸಲು ಕೇಂದ್ರ ಸರ್ಕಾರ ಮಾರ್ಚ್ 31 ರವರೆಗೆ ಗಡುವು ನೀಡಿದೆ. ಒಂದು ವೇಳೆ ನೀವು ಬಿಎಸ್ಎನ್ಎಲ್ ಮೊಬೈಲ್ ಸಂಖ್ಯೆ ಹೊಂದಿದ್ದು, ಅದು ಆಧಾರ್ ಗೆ ಲಿಂಕ್ ಆಗಿದೆಯೇ ಎಂದು ಪತ್ತೆಹಚ್ಚುವುದು ಹೇಗೆ?


ಇಲ್ಲಿದೆ ನೋಡಿ ಅದಕ್ಕೆ ಸುಲಭ ಪರಿಹಾರ. ಕೆಲವೊಮ್ಮೆ ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಆದ ಬಗ್ಗೆ ಎಸ್ ಎಂಎಸ್ ಬಂದಿರುವುದಿಲ್ಲ. ಹೀಗಾಗಿ ನೀವು ಕನ್ ಫ್ಯೂಸ್ ಗೆ ಒಳಗಾಗಿರುತ್ತೀರಿ. ಇಂತಹ ಸಂದರ್ಭದಲ್ಲಿ ಖಚಿತಪಡಿಸಲು ಸುಲಭದ ದಾರಿಯೊಂದನ್ನು ಬಿಎಸ್ಎನ್ಎಲ್ ನೀಡಿದೆ.


ಗ್ರಾಹಕರು 14546 ಎಂಬ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ತಮ್ಮ ಮೊಬೈಲ್ ಸಂಖ್ಯೆ ಆಧಾರ್ ಗೆ ಲಿಂಕ್ ಆಗಿದೆಯೇ ಎಂದು ದೃಢಪಡಿಸಿಕೊಳ್ಳಬಹುದು ಎಂದು ಸಂಸ್ಥೆ ಪ್ರಕಟಣೆ ನೀಡಿದೆ. ಆದರೆ ಸದ್ಯಕ್ಕೆ ಇದು ಆಂಧ್ರಪ್ರದೇಶ, ಕೇರಳ, ತೆಲಂಗಾಣ ಮತ್ತು ಪಂಜಾಬ್ ನಲ್ಲಿ ಮಾತ್ರ ಜಾರಿಗೆ ಬಂದಿದ್ದು, ಶೀಘ್ರದಲ್ಲೇ ರಾಜ್ಯದಲ್ಲೂ ಜಾರಿಗೆ ಬರಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :