Widgets Magazine

ಕೇವಲ ರೂ. 36ಕ್ಕೆ ಬಿಎಸ್‌ಎನ್ಎಲ್ 1 ಜಿಬಿ ಡಾಟಾ

New Delhi| Rajendra| Last Modified ಭಾನುವಾರ, 5 ಫೆಬ್ರವರಿ 2017 (11:47 IST)
ಸರಕಾರಿ ಸ್ವಾಮ್ಯದ ದೂರಸಂಪರ್ಕ ಕಂಪೆನಿ ಬಿಎಸ್ಎನ್ಎಲ್ ಡಾಟಾ ದರಗಳನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಕೇವಲ ರೂ.36ಕ್ಕೆ 1 ಜಿಬಿ 3ಜಿ ಡಾಟಾ ಪ್ಲಾನನ್ನು ಪ್ರಕಟಿಸಿದೆ. ಈಗಿರುವ ಟಾರಿಫ್ ವೋಚರ್‌ಗಳಿಗೆ ಪ್ರಸ್ತುತ ಡಾಟಾ ಹೋಲಿಕೆ ಮಾಡಿದರೆ, ಈ ತಿಂಗಳ 6ರಿಂದ 4 ಪಟ್ಟು ಅಧಿಕವಾಗಿ ಕೊಡುತ್ತಿರುವುದಾಗಿ ಹೇಳಿದೆ.

ರೂ.291ಕ್ಕೆ ರೀಚಾರ್ಜ್ ಮಾಡಿಕೊಂಡರೆ ಇಲ್ಲಿಯವರೆಗೆ 2 ಜಿಬಿ ಡಾಟಾ ನೀಡಲಾಗುತ್ತಿತ್ತು. ಇನ್ನು ಮುಂದೆ ಇದೇ ಬೆಲೆಗೆ 8ಜಿಬಿ ಡಾಟಾ ಲಭ್ಯವಾಗಲಿದೆ. ಇದರ ವ್ಯಾಲಿಡಿಟಿ 28 ದಿನಗಳು. ರೂ.78ಕ್ಕೆ 2ಜಿಬಿ ಡಾಟಾ ಸಿಗಲಿದೆ. ಒಂದು ಜಿಬಿಗೆ ಕೇವಲ ರೂ.36ರಷ್ಟಾಗಲಿದೆ. ಇದು ಅತ್ಯಂತ ಕಡಿಮೆ ದರ ಎಂದಿದೆ ಬಿಎಸ್ಎನ್ಎಲ್.

ರಿಲಯನ್ಸ್ ಜಿಯೋ ಡಾಟಾ, ಕರೆಗಳು ಮತ್ತು ಎಸ್ಎಂಎಸ್‌ ಸೇವೆಯನ್ನು ಆರು ತಿಂಗಳ ಕಾಲ ಉಚಿತವಾಗಿ ನೀಡಿದ ಪರಿಣಾಮ ಬಿಎಸ್ಎನ್ಎಲ್ ಸೇರಿದಂತೆ ಹಲವಾರು ದೂರಸಂಪರ್ಕ ಕಂಪೆನಿಗಳಿಗೆ ಭಾರಿ ಹೊಡೆತ ಬಿದ್ದಿದೆ. ಈಗ ತನ್ನ ಗ್ರಾಹಕರನ್ನು ಸೆಳೆಯಲು ನಾನಾ ರೀತಿಯ ಪ್ಲಾನ್‌ಗಳನ್ನು ಬಿಡಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :