ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಏರ್ಟೆಲ್ ಹಾಗೂ ವೊಡಾಫೋನ್ ನಿಂದ ಬಂಪರ್ ಆಫರ್

ನವದೆಹಲಿ| pavithra| Last Modified ಬುಧವಾರ, 30 ಅಕ್ಟೋಬರ್ 2019 (06:08 IST)
ನವದೆಹಲಿ : ದೀಪಾವಳಿ ಹಬ್ಬದ ಪ್ರಯುಕ್ತ ಏರ್ಟೆಲ್ ಹಾಗೂ ವೊಡಾಫೋನ್ ಗ್ರಾಹಕರಿಗಾಗಿ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ.ಏರ್ಟೆಲ್ ಗ್ರಾಹಕರಿಗಾಗಿ ರೂ349 ಹಾಗೂ ರೂ. 558 ರ ರಿಚಾರ್ಜ್ ಪ್ಲಾನ್ ನ್ನು ಬಿಡುಗಡೆ ಮಾಡಿದೆ. ಈ ಎರಡು ಪ್ಲಾನ್ ಗಳಲ್ಲಿ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಹಾಗೂ ರೋಮಿಂಗ್ ಕರೆ ಮತ್ತು 100 ಎಸ್ ಎಂ ಎಸ್  ಸಿಗಲಿದೆ. ಹಾಗೇ ರೂ 349 ಪ್ಲಾನ್ ನಲ್ಲಿ ಪ್ರತಿದಿನ 3 ಜಿಬಿ 3ಜಿ ಡೇಟಾ ಸಿಗಲಿದ್ದು, ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ರೂ 558 ಪ್ಲಾನ್ ನಲ್ಲಿ ಪ್ರತಿದಿನ 3 ಜಿಬಿ 3ಜಿ ಡೇಟಾ ಸಿಗಲಿದ್ದು, ಇದು 82 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. 

 

ವೊಡಾಫೋನ್ ಗ್ರಾಹಕರಿಗಾಗಿ ರೂ549 ರ ರಿಚಾರ್ಜ್ ಪ್ಲಾನ್ ನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಗ್ರಾಹಕರಿಗೆ ಪ್ರತಿದಿನ 3 ಜಿಬಿ 4ಜಿ ಡೇಟಾ ಸಿಗಲಿದ್ದು, ಪ್ರತಿದಿನ 3 ಜಿಬಿ 3ಜಿ ಡೇಟಾ ಸಿಗಲಿದ್ದು ಉಚಿತ ಕರೆ ಹಾಗೂ 100 ಎಸ್ ಎಂಎಸ್ ಸಿಗಲಿದೆ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. 

 

 
ಇದರಲ್ಲಿ ಇನ್ನಷ್ಟು ಓದಿ :