Widgets Magazine

ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸುವವರಿಗೆ ಐಸಿಐಸಿಐ ಬ್ಯಾಂಕ್ ನಿಂದ ಬಂಪರ್ ಆಫರ್

ಬೆಂಗಳೂರು| pavithra| Last Modified ಗುರುವಾರ, 18 ಅಕ್ಟೋಬರ್ 2018 (14:33 IST)
ಬೆಂಗಳೂರು : ಈ ಹಬ್ಬದ ದಿನಗಳಲ್ಲಿ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಒಂದನ್ನು ನೀಡಿದೆ.

ಹೌದು. ಐಸಿಐಸಿಐ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುವ ಅರ್ಹ ಗ್ರಾಹಕರಿಗೆ ಕಾರು ಖರೀದಿಸಲು ಶೇಕಡ ನೂರರಷ್ಟು ಸಾಲ ನೀಡುವುದಾಗಿ ಹೇಳಿದ್ದು, ಈ ಮೊತ್ತ 20 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸಬೇಕು ಅಂತ ಅಂದುಕೊಂಡಿರುವವರಿಗೆ ಇದು ಸಿಹಿ ಸುದ್ದಿ.


ಐಸಿಐಸಿಐ ಬ್ಯಾಂಕ್, ಆನ್ ರೋಡ್ ಪ್ರೈಸ್ ಮೇಲೆ ಶೇಕಡ ನೂರರಷ್ಟು ಸಾಲ ನೀಡುತ್ತಿದ್ದು, ಕೇವಲ 4 ಗಂಟೆಗಳಲ್ಲಿ ಸಾಲ ಲಭ್ಯವಾಗುತ್ತದೆ ಎಂದು ತಿಳಿಸಿದೆ. ಈ ಸೌಲಭ್ಯ ಪಡೆಯಲು ತಾವು ಅರ್ಹರಾಗಿದ್ದೆವೆಯೇ ಎಂಬುದನ್ನು ತಿಳಿಯಲು ಬ್ಯಾಂಕ್ ಗ್ರಾಹಕರು ತಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ 5676766 ಸಂದೇಶ ಕಳುಹಿಸಬಹುದು ಅಥವಾ ಸಮೀಪದ ಬ್ರಾಂಚ್ ಭೇಟಿ ನೀಡಬೇಕಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ
.





ಇದರಲ್ಲಿ ಇನ್ನಷ್ಟು ಓದಿ :