Widgets Magazine

ಸ್ಮಾರ್ಟ್‌ಫೋನ್ ರೆಡ್‌ಮಿ ಗೋ ಖರೀದಿಸುವ ಗ್ರಾಹಕರಿಗೆ ಜಿಯೋ ಕಡೆಯಿಂದ ಬಂಪರ್ ಆಫರ್

ನವದೆಹಲಿ| pavithra| Last Modified ಬುಧವಾರ, 27 ಮಾರ್ಚ್ 2019 (09:32 IST)
ನವದೆಹಲಿ : ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್ ರೆಡ್‌ಮಿ ಗೋ ಖರೀದಿಸುವ ಗ್ರಾಹಕರಿಗೆ ರಿಲಯನ್ಸ್ ಜಿಯೋ ಬಂಪರ್ ಆಫರ್ ವೊಂದನ್ನು ಘೋಷಣೆ ಮಾಡಿದೆ.


ಮೈಜಿಯೋ ಆಪ್‌ನಲ್ಲಿ ತಲಾ ರೂ. 50 ಮೌಲ್ಯದ 44 ರಿಯಾಯಿತಿ ಕೂಪನ್ ಗಳ ರೂಪದಲ್ಲಿ ರೂ. 2200 ಕ್ಯಾಶ್‌ಬ್ಯಾಕ್ ಅರ್ಹ ಗ್ರಾಹಕರಿಗೆ ಲಭ್ಯವಾಗುತ್ತದೆ. ರೂ. 198 ಹಾಗೂ ರೂ. 299 ರೀಚಾರ್ಜ್‌ ಮೇಲೆ ಈ ವೋಚರ್‌ಗಳನ್ನು ಬಳಸಿಕೊಳ್ಳಬಹುದು. ಜೊತೆಗ 299 ರೀಚಾರ್ಜ್ ಅನ್ನು ವಾಸ್ತವಿಕವಾಗಿ ರೂ. 249ಕ್ಕೆ ಪಡೆದುಕೊಳ್ಳಬಹುದು.


ಶಿಯೋಮಿ ರೆಡ್‌ಮಿ ಗೋ ಸ್ಮಾರ್ಟ್‌ಫೋನ್‌ಗಳಿಗೆ ಜಿಯೋ ಸಹವರ್ತಿ ಸಂಸ್ಥೆಯಾಗಿದ್ದು, ರೆಡ್‌ಮಿ ಗೋ ಸ್ಮಾರ್ಟ್‌ಫೋನ್ ಮೇಲೆ ನೀಡಲಾಗುವರೂ. 2200 ಕ್ಯಾಶ್‌ಬ್ಯಾಕ್ ಹಾಗೂ 100 ಜಿಬಿ ಹೆಚ್ಚುವರಿ ಡೇಟಾ 198 ರೂ. ಹಾಗೂ 299 ರೂ. ರೀಚಾರ್ಜ್‌ಗಳ ಮೇಲೆ ಅನ್ವಯವಾಗಲಿದೆ.


ಗ್ರಾಹಕರು 100 ಜಿಬಿ ಹೆಚ್ಚುವರಿ ಡೇಟಾವನ್ನು ಪೆಯಲಿದ್ದು, ಇದು ತಲಾ 10 ಜಿಬಿಯ ಹೆಚ್ಚುವರಿ ಡೇಟಾ ಕೂಪನ್ ಗಳ ರೂಪದಲ್ಲಿ ಸಿಗಲಿದೆ. ಕೂಪನ್ ಗಳನ್ನು ವಾಯಿದೆಯ ಅವಧಿಯಲ್ಲಿ ಗರಿಷ್ಠ ಹತ್ತು ರೀಚಾರ್ಜ್‌ಗಳನ್ನು ಮಾಡಿದಾಗ ಬಳಸಿಕೊಳ್ಳಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :