Widgets Magazine

ಇಂದಿನಿಂದ ರೂ. 50 ಸಾವಿರ ವಿತ್‌ಡ್ರಾ ಮಿತಿ

New Delhi| Rajendra| Last Modified ಸೋಮವಾರ, 20 ಫೆಬ್ರವರಿ 2017 (13:19 IST)
ಅಧಿಕ ಮೌಲ್ಯದ ನೋಟುಗಳು ರದ್ಧಾದ ಬಳಿಕ ನಗದು ವಿತ್‌ಡ್ರಾ ಮೇಲೆ ವಿಧಿಸಿದ್ದ ನಿಬಂಧನೆಗಳಿಂದ ಬ್ಯಾಂಕ್ ಖಾತಾದಾರರು ಬಹಳ ತೊಂದರೆಗಳನ್ನು ಅನುಭವಿಸಿದರು. ಈಗ ಅವರಿಗೆಲ್ಲಾ ಶುಭವಾರ್ತೆ. ಉಳಿತಾಯ ಖಾತೆ ಹೊಂದಿರುವವರು ಇಂದಿನಿಂದ ವಾರಕ್ಕೆ ರೂ.50 ಸಾವಿರವರೆಗೂ ವಿತ್‌ಡ್ರಾ ಮಾಡಿಕೊಳ್ಳಬಹುದು.

ಜನವರಿ 30ರಂದು ಜಾರಿ ಮಾಡಿದ ಅಧಿಸೂಚನೆಯಲ್ಲಿ ಹಂತಹಂತವಾಗಿ ನಗದು ಹಿಂಪಡೆತದ ಮೇಲಿನ ನಿಬಂಧನೆಗಳನ್ನು ಸಡಿಲ ಮಾಡುತ್ತಿರುವುದಾಗಿ ಆರ್‌ಬಿಐ ತಿಳಿಸಿದ್ದು, ಅದರ ಪ್ರಕಾರ ಫೆ.20ರಿಂದ ಉಳಿತಾಯ ಖಾತೆ ಇರುವವರು ವಾರಕ್ಕೆ ರೂ.50 ಸಾವಿರವರೆಗೂ ವಿತ್‍ಡ್ರಾ ಮಾಡಬಹುದುದು.

ಇಷ್ಟು ದಿನ ರೂ.24 ಸಾವಿರವರೆಗೂ ನಗದು ಹಿಂಪಡೆಯಬಹುದಾಗಿತ್ತು. ಮಾರ್ಚ್ 13ರಿಂದ ಎಲ್ಲ ವಿತ್‌ಡ್ರಾ ಮಿತಿ ರದ್ದಾಗಲಿವೆ. ಆದರೆ ಚಾಲ್ತಿ ಖಾತೆ
ಹೊಂದಿರುವವರಿಗೆ ಯಾವುದೇ ನಿಬಂಧನೆಗಳು ಇಲ್ಲ. ರೈತರಾದರೆ ವಾರಕ್ಕೆ ರೂ.50 ಸಾವಿರ, ವಿವಾಹಕ್ಕೆ ರೂ.2.5 ಲಕ್ಷ ವಿತ್‌ಡ್ರಾ ಮಾಡಲು ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :