Widgets Magazine

ಇನ್ಮುಂದೆ ಚೆಕ್ ಬೌನ್ಸ್ ಆದರೆ ಜಾಮೀನು ರಹಿತ ಜೈಲು ಶಿಕ್ಷೆ..

ನವದೆಹಲಿ| chandralekha| Last Modified ಸೋಮವಾರ, 12 ಜೂನ್ 2017 (15:04 IST)
ನವದೆಹಲಿ: ಇನ್ಮುಂದೆ ಗ್ರಾಹಕರು ತಮ್ಮ ಚೆಕ್ ಬೌನ್ಸ್ ಅಗದಂತೆ ಎಚ್ಚರದಿಂದಿರುವುದು ಅಗತ್ಯ. ಒಂದು ವೇಳೆ ನೀವು ಬರೆದುಕೊಟ್ಟ ಚೆಕ್ ಗೆ ನಿಮ್ಮಖಾತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣವಿಲ್ಲದೇ ಅದು ಬೌನ್ಸ್ ಆದರೆ ನಿಮಗೆ ಜಾಮೀನು ರಹಿತ ಶಿಕ್ಷೆ ಖಂಡಿತ. ಇಂತದ್ದೊಂದು ಕಾನನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
 
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಈ ಗಿರುವ ಚೆಕ್ ಬೌನ್ಸ್ ಪ್ರಕರಣದ ಕಾನೂನು ತಿದ್ದುಪಡಿ ಮಸೂದೆಯನ್ನು ಮಂಡಿಸಲು ಮುಂದಾಗಿದ್ದು, ಈಬಾರಿಯ ಮಳೆಗಾಲದ ಅಧಿವೇಶನದಲ್ಲಿಯೇ ಅದನ್ನು ಮಂಡಿಸಲು ಮುಂದಾಗಿದೆ. 
 
ನೆಗೋಬಾಯ್ಡ್ ಇನ್ಸ್ಟ್ರುಮೆಂಟ್ಸ್ (ಎನ್ಐ) ಆಕ್ಟ್ ನಡಿ, ಕೋರ್ಟ್ ನಲ್ಲಿ ಕೇಸು ದಾಖಲಾದ ತಕ್ಷಣ, ಕೋರ್ಟ್ ನ ಹೊರಗೆ ವಿವಾದವನ್ನು ಇತ್ಯರ್ಥ ಮಾಡಿಕೊಳ್ಳುವಂತೆ ನಿರ್ದಿಷ್ಟ ಕಾಲಾವಧಿ ನೀಡಲಾಗುತ್ತದೆ. ಇದರಲ್ಲಿ ವಿಫಲವಾದರೆ ಬಾಕಿದಾರನನ್ನು ಜೈಲಿಗೆ ಕಳುಹಿಸಲಾಗುತ್ತದೆ. ಮತ್ತು ಜಾಮೀನು ನೀಡುವಾಗ ಕಠಿಣ  ಷರತ್ತನ್ನು ವಿಧಿಸಲಾಗುತ್ತದೆ. ಕಳೆದ ವರ್ಷ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು, ಚೆಕ್ ನ್ನು ಕ್ಲಿಯರೆನ್ಸ್ಗಾಗಿ ನೀಡಲಾದ ಸ್ಥಳದಲ್ಲಿ ಕೇಸನ್ನು ಕೋರ್ಟ್ ನಲ್ಲಿ ದಾಖಲಿಸಲು ಅವಕಾಶ ನೀಡಲಾಗಿತ್ತು. 
 ಇದರಲ್ಲಿ ಇನ್ನಷ್ಟು ಓದಿ :