ದೆಹಲಿಯಲ್ಲಿ ನೈಸರ್ಗಿಕ ಅನಿಲ, ಅಡುಗೆ ಅನಿಲ ದರದಲ್ಲಿ ಇಳಿಕೆ

ನವದೆಹಲಿ| Vinod| Last Modified ಶನಿವಾರ, 2 ಏಪ್ರಿಲ್ 2016 (13:59 IST)
ನವದೆಹಲಿ: ದರವನ್ನು ಪ್ರತಿ ಕ್ಯೂಬಿಕ್ ಮೀಟರ್ಸ್‌ಗೆ ಶೇ.20 ರಷ್ಟು ದರ ಕಡಿತಗೊಳಿಸಿದ್ದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆ.ಜಿ ನೈಸರ್ಗಿಕ ಅನಿಲದ ಮೇಲೆ 0.60 ಪೈಸೆ ಮತ್ತು ಅಡುಗೆ ಅನಿಲದ ಮೇಲೆ 0.65 ಪೈಸೆಯಷ್ಟು ದರ ಕಡಿತಗೊಳಿಸಲಾಗಿದೆ.
ಕೇಂದ್ರ ಸರಕಾರ ದೇಶಿಯ ನೈಸರ್ಗಿ ಅನಿಲ ಉತ್ಪಾದನೆಯ ದರವನ್ನು ಕಡಿತಗೊಳಿಸಿರುವ ಅಧಿಸೂಚನೆಯ ಬಗ್ಗೆ ಮಾಹಿತಿ ನೀಡಿದ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್,  ಸಿಎನ್‌ಜಿ, ಪಿಎನ್‌ಜಿ ಪರಿಷ್ಕ್ರತ ದರ ಮಧ್ಯ ರಾತ್ರಿಯಿಂದ ಜಾರಿಗೆ ಬಂದಿದೆ ಎಂದು ತಿಳಿಸಿದೆ.
 
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೈಸರ್ಗಿಕ ಅನಿಲದ ಬೆಲೆ 0.60 ಪೈಸೆ ಕಡಿತಗೊಳಿಸಿದ್ದು, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಘಾಜಿಯಾಬಾದ್‌ನಲ್ಲಿ 0.70 ಪೈಸೆ ಕಡಿತಗೊಳಿಸಿರುವುದಾಗಿ ಐಜಿಎಲ್ ತಿಳಿಸಿದೆ.
 
ಪ್ರಸಕ್ತ ಪರಿಷ್ಕ್ರತ ದರ. ದೆಹಲಿಯಲ್ಲಿ ಪ್ರತಿ ಕೆಜಿಗೆ 36.60 ರೂಪಾಯಿ ಮತ್ತು ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಘಾಜಿಯಾಬಾದ್‌ನಲ್ಲಿ ಪ್ರತಿ ಕೆಜಿಗೆ 41.90 ದರ ನಿಗದಿ ಪಡಿಸಿದ್ದು, ಏಪ್ರಿಲ್ 1 ಅಥವಾ 2ರ ಮಧ್ಯರಾತ್ರಿ ಪರಿಷ್ಕೃತ ದರ ಜಾರಿಗೊಳ್ಳಲಿದೆ.
 
ಇತರೆ ರಾಜ್ಯಗಳಿಗೆ ಹೊಲಿಸಿದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೈಸರ್ಗಿಕ ಅನಿಲದ ಬೆಲೆ ಕಡಿಮೆ ಇದೆ.
 


ಇದರಲ್ಲಿ ಇನ್ನಷ್ಟು ಓದಿ :