Widgets Magazine

ಜೂನ್ 16ರಿಂದ ದೇಶಾದ್ಯಂತ ನಿತ್ಯ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ

ಮುಂಬೈ| venu| Last Modified ಶುಕ್ರವಾರ, 9 ಜೂನ್ 2017 (09:07 IST)
ಅಂತಾರಾಷ್ಟ್ರೀಯ ತೈಲ ಬೆಲೆಗೆ ಅನುಗುಣವಾಗಿ ಜೂನ್ 16ರಿಂದ ಪ್ರತಿ ನಿತ್ಯ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಹಿಂದೆ ಪ್ರಾಯೋಗಿಕವಾಗಿ ಪುದುಚೇರಿ, ವಿಶಾಖಪಟ್ಟಣ, ಚಂಢೀಗಡ, ಉದಯ್ ಪುರ, ಜೆಮ್ ಶೆಡ್ ಪುರ ಸೇರಿ 5 ನಗರಗಳಲ್ಲಿ ಮಾತ್ರ ತೈಲ ಬೆಲೆ ಪರಿಷ್ಕರಣೆ ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ ಜೂನ್ 16ರಿಂದ ದೇಶಾದ್ಯಂತ ಇರುವ 56000 ಪೆಟ್ರೋಲ್ ಬಂಕ್`ಗಳಲ್ಲಿ ನಿತ್ಯ ಬೆಲೆ ಪರಿಷ್ಕರಣೆಗೆ ನಿರ್ಧರಿಸಿದೆ.

ನಿನ್ನೆ ನಡೆದ ಪೆಟ್ರೋಲಿಯಂ ಸಚಿವಾಲಯದ ಉನ್ನಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಿದೆ. ಹೀಗಾಗಿ, ಇನ್ಮುಂದೆ ಪೆಟ್ರೋಲ್ ಬೆಲೆ, ರೂಪಾಯಿ ಮೌಲ್ಯದ ಆಧಾರದ ಮೇಲೆ ನಿತ್ಯ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಳಿತವನ್ನ ಸಾರ್ವಜನಿಕರು ಅನುಭವಿಸಬೇಕಿದೆ.
 
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

//kannada.
fantasycricket.webdunia.com/ಇದರಲ್ಲಿ ಇನ್ನಷ್ಟು ಓದಿ :