ಅಧಿಕ ಮೌಲ್ಯದ ನೋಟು ನಿಷೇಧದಿಂದ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಭಾರಿ ಹೊಡೆತ ನೀಡಿದೆ. ಕಳೆದ ವರ್ಷ ನಡೆದ ನೊಟು ನಿಷೇಧದ ಪ್ರಭಾವದಿಂದ ಫೋನ್ ಮಾರಾಟ ಕುಸಿದಿದೆ ಎಂದು ಅಂತಾರಾಷ್ಟ್ರೀಯ ಡಾಟಾ ಕಾರ್ಪೊರೇಷನ್ (ಐಡಿಸಿ) ಮಂಗಳವಾರ ಹೇಳಿದೆ. ಕಳೆದ ಅಕ್ಟೋಬರ್ಗೆ ಹೋಲಿಸಿದರೆ ನವೆಂಬರ್ನಲ್ಲಿ ಸ್ಮಾರ್ಟ್ಫೋನ್ ಮಾರಾಟ ಶೇ.30.5ರಷ್ಟು ಕುಸಿತ ಕಂಡಿದೆ ಎಂದು ಐಡಿಸಿ ತಿಳಿಸಿದೆ. ಭಾರತದಲ್ಲಿ 50 ಪ್ರಮುಖ ನಗರಗಳಲ್ಲಿ ಐಡಿಸಿ ನಡೆಸಿದ ಸಮೀಕ್ಷೆಯಲ್ಲಿ ಈ ಸಂಗತಿ ಬಹಿರಂಗವಾಗಿದೆ. ನೋಟು ನಿಷೇಧ