ಅಧಿಕ ಮೌಲ್ಯದ ನೋಟು ನಿಷೇಧದ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ಗಳಲ್ಲಿ ವಹಿವಾಟು ನಡೆಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನಗದಿಗಾಗಿ ಬ್ಯಾಂಕು, ಎಟಿಎಂಗಳ ಮುಂದೆ ನಿಲ್ಲುವುದಕ್ಕಿಂತ ಆಪ್ಸ್ ಮೂಲಕ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಲು ಜನ ಮುಂದಾಗಿದ್ದಾರೆ.