Widgets Magazine

ರಿಲಾಯನ್ಸ್ ಜಿಯೋ-ಫೈಬರ್ ಬ್ರಾಡ್‌ ಬ್ಯಾಂಡ್ ಯೋಜನೆಯಲ್ಲಿ ಏನೆಲ್ಲಾ ಇದೆ ಗೊತ್ತಾ?

ನವದೆಹಲಿ| pavithra| Last Modified ಶನಿವಾರ, 7 ಸೆಪ್ಟಂಬರ್ 2019 (06:30 IST)
ನವದೆಹಲಿ : ಗ್ರಾಹಕರು ಕಾತುರದಿಂದ ಕಾಯುತ್ತಿದ್ದ ರಿಲಾಯನ್ಸ್ ಜಿಯೋ-ಫೈಬರ್ ಬ್ರಾಡ್‌ ಬ್ಯಾಂಡ್ ಯೋಜನೆ ಶುರುವಾಗಿದ್ದು. ಈ ಯೋಜನೆಯಡಿಯಲ್ಲಿ ಗ್ರಾಹಕರಿಗೆ ಮಾಸಿಕ 699 ರೂ.ಯಿಂದ 8,499 ರೂಪಾಯಿವರೆಗೆ ವಿವಿಧ ಪ್ಯಾಕ್​ ಗಳು ಲಭ್ಯವಿದೆ.
699 ರೂ. ಪ್ಲ್ಯಾನ್​ನಲ್ಲಿ 100 ಎಂಬಿಪಿಎಸ್​ ವೇಗ ಸಿಗಲಿದ್ದು, 8,499 ರೂ. ಪ್ಯಾಕ್​ನಲ್ಲಿ 1ಜಿಬಿಪಿಎಸ್​ ವರೆಗೆ ವೇಗ ಸಿಗಲಿದೆ. ಎಲ್ಲ ಯೋಜನೆಗಳಿಗೂ ಅನಿಯಮಿತ ಡೇಟಾ ಸೇವೆ ಲಭ್ಯವಿದೆ. ಆದರೆ, ಒದು ವೇಳೆ ಹೆಚ್ಚಿನ ಡೇಟಾ ಬಳಸಿದರೆ ಇಂಟರನೆಟ್​ ವೇಗ ಕಡಿಮೆ ಆಗಲಿದೆ. ಹಾಗೇ ಮಾಸಿಕ 1299 ರೂಪಾಯಿಯ ಗೋಲ್ಡ್ ಪ್ಲಾನ್ ಸೇರಿದಂತೆ ಇನ್ನಿತರೆ ಗ್ರಾಹಕಸ್ನೇಹಿ ಪ್ಲಾನ್ ಗಳನ್ನು ಜಿಯೋ ಪ್ರಕಟಿಸಿದೆ.


ಗ್ರಾಹಕರಿಗೆ ಜಿಯೋ ಆರು ಬಗೆಯ ಟಾರಿಫ್ ಪ್ಲಾನ್ ಅನ್ನು ನೀಡುತ್ತಿದೆ. ಇದರಲ್ಲಿ ವಾರ್ಷಿಕ ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡರೆ ಉಚಿತವಾಗಿ 5 ಸಾವಿರ ರೂಪಾಯಿ ಮೌಲ್ಯದ ಜಿಯೋ ಹೋಮ್ ಗೇಟ್ವೇ ಮತ್ತು ಜಿಯೋಫೈಬರ್ ಸ್ವಾಗತ ಕೊಡುಗೆಯ ಭಾಗವಾಗಿ ಕೇಬಲ್ ಟಿವಿ ಸಂಪರ್ಕಗಳಿಗಾಗಿ ಜಿಯೋ 4ಕೆ ಸೆಟ್ ಟಾಪ್ ಬಾಕ್ಸ್ ಪಡೆಯಬಹುದು.

ಇದರಲ್ಲಿ ಇನ್ನಷ್ಟು ಓದಿ :