Widgets Magazine

ಬ್ಯಾಂಕ್ ಕೆಲಸಗಳಿದ್ದರೆ ಇಂದೇ ಮಾಡಿಕೊಳ್ಳಿ!

ಬೆಂಗಳೂರು| Krishnaveni| Last Modified ಬುಧವಾರ, 24 ಜನವರಿ 2018 (08:54 IST)
ಬೆಂಗಳೂರು: ಈ ವಾರ ತುರ್ತಾಗಿ ಬ್ಯಾಂಕ್ ವ್ಯವಹಾರಗಳನ್ನು ಮಾಡಿ ಮುಗಿಸಬೇಕೆಂದು ತುರ್ತಿನಲ್ಲಿದ್ದರೆ ಇಂದೇ ಮಾಡಿಕೊಳ್ಳುವುದು ಒಳಿತು!

ಈ ವಾರದ ಅಂತ್ಯದಲ್ಲಿ ಮತ್ತೆ ಸಾಲು ಸಾಲು ರಜೆ ಬರುತ್ತಿರುವುದರಿಂದ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಹೀಗಾಗಿ ಏನೇ ವ್ಯವಹಾರಗಳಿದ್ದರೂ ಇಂದೇ ಮಾಡಿಕೊಳ್ಳುವುದು ಉತ್ತಮ.ನಾಳೆ ಅಂದರೆ ಜನವರಿ 25 ರಂದು ಕರ್ನಾಟಕ ಬಂದ್ ಇರುವುದರಿಂದ ಬಹುತೇಕ ಬ್ಯಾಂಕ್ ಗಳು ಕಾರ್ಯನಿರ್ವಹಣೆ ಮಾಡುವುದು ಅನುಮಾನ. ಒಂದು ವೇಳೆ ತೆರೆದರೂ ಸಿಬ್ಬಂದಿ ಕೊರತೆಯಿಂದ ಕಷ್ಟವಾಗಬಹುದು.

ಜನವರಿ 26 ಅಂದರೆ ಶುಕ್ರವಾರ ಗಣರಾಜ್ಯೋತ್ಸವ ನಿಮಿತ್ತ ರಜೆ. ಶನಿವಾರ ತಿಂಗಳ ಕೊನೆ ಶನಿವಾರವೆಂಬ ಕಾರಣಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ರಜೆಯಿರುತ್ತದೆ. ಭಾನುವಾರ ಮಾಮೂಲಿನ ರಜೆ.

ಹೀಗಾಗಿ ಇಂದು ಬ್ಯಾಂಕ್ ಕೆಲಸ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಸೋಮವಾರವಷ್ಟೇ ಸಾಧ್ಯವಾಗುತ್ತದೆ. ಹಾಗಾಗಿ ತುರ್ತು ಕೆಲಸಗಳಿಗೆ ಇಂದೇ ತೆರಳಿ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :