ನವದೆಹಲಿ : ದೇಶದ ರಫ್ತು ವಹಿವಾಟು ಅಕ್ಟೋಬರ್ 1ರಿಂದ 14ರವರೆಗಿನ ಅವಧಿಯಲ್ಲಿ ಶೇಕಡ 40.5ರಷ್ಟು ಹೆಚ್ಚಳ ಆಗಿದ್ದು, ₹ 1.14 ಲಕ್ಷ ಕೋಟಿಗೆ ತಲುಪಿದೆ. ಪೆಟ್ರೋಲಿಯಂ ಉತ್ಪನ್ನಗಳು, ಎಂಜಿನಿಯರಿಂಗ್ ಮತ್ತು ಔಷಧ ವಲಯಗಳ ಉತ್ತಮ ಬೆಳವಣಿಗೆಯಿಂದ ರಫ್ತು ವಹಿವಾಟು ಈ ಪ್ರಮಾಣದ ಬೆಳವಣಿಗೆ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ಪ್ರಾಥಮಿಕ ಮಾಹಿತಿ ನೀಡಿದೆ. ಈ ಅವಧಿಯಲ್ಲಿ ಆಮದು ವಹಿವಾಟು ಶೇ 60.72ರಷ್ಟು ಹೆಚ್ಚಾಗಿ ₹ 1.11 ಲಕ್ಷ ಕೋಟಿ