Widgets Magazine

ಟಿವಿಗಾಗಿ ಫೇಸ್‍ಬುಕ್ ಹೊಸ ವಿಡಿಯೋ ಆಪ್

New Delhi| Rajendra| Last Modified ಶುಕ್ರವಾರ, 17 ಫೆಬ್ರವರಿ 2017 (13:26 IST)
ಪ್ರಮುಖ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಿಂದ ಹೊಚ್ಚಹೊಸ ವಿಡಿಯೋ ಆಪ್ ಬಿಡುಗಡೆಯಾಗಿದೆ. ವಿಶೇಷವಾಗಿ ಟಿವಿಗಾಗಿ ಫೇಸ್‌ಬುಕ್ ಈ ವಿಡಿಯೋ ಆಪನ್ನು ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಇದು ಆಪೆಲ್ ಟಿವಿ, ಅಮೆಜಾನ್ ಫೈರ್ ಟಿವಿ, ಸ್ಯಾಂಸಂಗ್ ಸ್ಮಾರ್ಟ್ ಟಿವಿ ಆಪ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ.

ಈ ಆಪ್ ಮೂಲಕ ಸ್ನೇಹಿತರು ಅಥವಾ ಫಾಲೋ ಆಗುತ್ತಿರುವ ಫೇಸ್‍ಬುಕ್ ಪುಟಗಳಲ್ಲಿ ಪೋಸ್ಟ್ ಮಾಡಿದ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ. ಅದೇ ರೀತಿ ಟಾಪ್ ಲೈವ್ ವಿಡಿಯೋಗಳು, ಆಸಕ್ತರನ್ನು ಅವಲಂಭಿಸಿ ರೆಕಮೆಂಡೆಡ್ ವಿಡಿಯೋಗಳನ್ನು ಸಹ ವೀಕ್ಷಿಸಬಹುದಾಗಿದೆ.

ಮತ್ತೆ ನೋಡಲು ಸೇವ್ ಮಾಡಿಕೊಂಡ ವಿಡಿಯೋಗಳು, ಅದಾಗಲೇ ನೋಡಿರುವ ವಿಡಿಯೋಗಳನ್ನು ಸಹ ಈ ಆಪ್ ಮೂಲಕ ವೀಕ್ಷಿಸಲು ಸಾಧ್ಯವಾಗಲಿದೆ ಎಂದು ಫೇಸ್‍ಬುಕ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಒಟ್ಟಾರೆಯಾಗಿ ಫೇಸ್‌ಬುಕ್ ಹೊಸ ಮಾಧ್ಯಮಗಳಿಗೂ ತೆರೆದುಕೊಂಡು ಇನ್ನಷ್ಟು ಜನಪ್ರಿಯವಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :