ಬಳಕೆದಾರರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ ಮತ್ತು ಅವರನ್ನು ಕಾರ್ಮಿಕ ವರ್ಗ, ಮಧ್ಯಮ ವರ್ಗ ಅಥವಾ ಮೇಲ್ವರ್ಗ ಎಂಬ ಮೂರು ವರ್ಗಗಳಲ್ಲಿ ಪ್ರತ್ಯೇಕಿಸುವ ತಂತ್ರಜ್ಞಾನಕ್ಕಾಗಿ ಫೇಸ್ಬುಕ್ ಪೇಟೆಂಟ್ಗೆ ಅರ್ಜಿ ಸಲ್ಲಿಸಿದೆ. ಪೇಟೆಂಟ್ನ ಪ್ರಕಾರ, ದೈತ್ಯ ಸಾಮಾಜಿಕ ಮಾಧ್ಯಮವು ಬಳಕೆದಾರರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಊಹಿಸುವ ಸಲುವಾಗಿ ವಿದ್ಯಾರ್ಹತೆ, ಮನೆ ಮಾಲೀಕತ್ವ ಮತ್ತು ಇಂಟರ್ನೆಟ್ ಬಳಕೆಯಂತಹ ಅವರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ನಿರ್ಮಿಸಲು ಬಯಸಿದೆ ಎಂದು ಡೈಲಿಮೇಲ್ ಶನಿವಾರದಂದು ವರದಿ ಮಾಡಿದೆ.