ಮುಂಬೈ: ನಿರೀಕ್ಷೆಯಂತೇ ಮುಕೇಶ್ ಅಂಬಾನಿ ತಮ್ಮ ರಿಲಯನ್ಸ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಜಿಯೋ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ್ದಾರೆ. ಅಂಬಾನಿ ಮಕ್ಕಳಾದ ಇಶಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಜಿಯೋ ಫೋನ್ ಲೋಕಾರ್ಪಣೆ ಮಾಡಿದರು.ಜಿಯೋ ಸಿಮ್ ಮೂಲಕ ಉಚಿತವಾಗಿ ಇಂಟರ್ನೆಟ್ ಒದಗಿಸಿದ್ದ ರಿಲಯನ್ಸ್ ಇದೀಗ ಜಿಯೋ ಫೋನ್ ನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ನೀಡಲಿದೆ. ಆದರೂ ಫೋನ್ ಖರೀದಿಸುವಾಗ 1500 ರೂ. ಡೆಪಾಸಿಟ್ ಪಾವತಿಸಬೇಕು. ಇದನ್ನು ಮೂರು ವರ್ಷಗಳ