Widgets Magazine

ಫ್ಲಿಪ್‌ಕಾರ್ಟ್‌ಗೆ ಹೊಸ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ

New Delhi| Rajendra| Last Modified ಮಂಗಳವಾರ, 10 ಜನವರಿ 2017 (12:41 IST)
ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್ ಇಂಡಿಯಾಗೆ ಹೊಸ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನೇಮಕಗೊಂಡಿದ್ದಾರೆ. ಸಿಇಓ ಆಗಿದ್ದ ಕಂಪನಿ ಸಹ ವ್ಯವಸ್ಥಾಪಕ ಬಿನ್ನಿ ಬನ್ಸಾಲ್ ಸ್ಥಾನಕ್ಕೆ ಕಲ್ಯಾಣ್ ಕೃಷ್ಣಮೂರ್ತಿಯವನ್ನು ನೇಮಿಸಲಾಗಿದೆ.

ಹೊಸದಾಗಿ ರೂಪಿಸಿರುವ ಗ್ರೂಪ್ ಸಿಇಓ ಜವಾಬ್ದಾರಿಯನ್ನು ಬನ್ಸಲ್‌ಗೆ ಒಪ್ಪಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಟೈಗರ್ ಗ್ಲೋಬಲ್ ಮಾಜಿ ಎಕ್ಸಿಕ್ಯೂಟಿವ್ ಆಗಿದ್ದ ಕೃಷ್ಣಮೂರ್ತಿ ಕಳೆದ ಜೂನ್‌ನಲ್ಲಿ ಫ್ಲಿಕ್‍ಕಾರ್ಟ್ ಸೇರಿದ್ದಾರೆ.

ಇತ್ತೀಚೆಗೆ ಫ್ಲಿಪ್‌ಕಾರ್ಟ್ ಐಫೋನ್ 6, 16ಜಿಬಿ ಸಾಮರ್ಥ್ಯದ ಫೋನ್ ಮೆಲೆ ಸುಮಾರು ರೂ.22,000
ರಿಯಾಯಿತಿ ಕೊಡುತ್ತಿದ್ದು, ಕೇವಲ ರೂ.9,990ಕ್ಕೆ ಮಾರಾಟ ಮಾಡುತ್ತಿರುವುದಾಗಿ ಪ್ರಕಟಿಸಿದ್ದು ಗೊತ್ತೇ ಇದೆ. ಹೊಸ ಸಿಇಓ ನೇಮಗೊಂಡಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಕೊಡುಗೆಗಳು ಫ್ಲಿಪ್‌ಕಾರ್ಟ್‌ನಿಂದ ಹೊರಬೀಲುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :