Widgets Magazine

ಫ್ಲಿಪ್‌ಕಾರ್ಟ್‌ನಿಂದ ಮತ್ತೆ ಆಫರ್‌ಗಳ ಸುರಿಮಳೆ

New Delhi| Rajendra| Last Modified ಗುರುವಾರ, 15 ಡಿಸೆಂಬರ್ 2016 (09:36 IST)
ಬಿಗ್ ದಿಪಾವಳಿ ಸೇಲ್, ಬಿಗ್ ಬಿಲಿಯನ್ ಡೇ ಹೆಸರಿನಲ್ಲಿ ಈಗಾಗಲೆ ತನ್ನ ಗ್ರಾಹಕರಿಗೆ ತುಂಬಾ ಹತ್ತಿರವಾದ ಆನ್‌ಲೈನ್ ಶಾಪಿಂಗ್ ದಿಗ್ಗಜ ಕಂಪನಿ ಫ್ಲಿಪ್‌ಕಾರ್ಟ್...ಇದೀಗ ಮತ್ತೊಂದು ಬಂಪರ್ ಆಫರ್‌ನೊಂದಿಗೆ ಬರುತ್ತಿದೆ. ಬಿಗ್ ಶಾಪಿಂಗ್ ಡೇಸ್ ಎಂದು ಇದಕ್ಕೆ ಹೆಸರಿಟ್ಟಿದೆ.
 
ಡಿಸೆಂಬರ್ 18ರಿಂದ 21ರವರೆಗೆ ನಾಲ್ಕು ದಿನಗಳ ಕಾಲ ಭಾರಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದೆ. ಎಸ್‍ಬಿಐ ಕ್ರೆಡಿಟ್ ಕಾರ್ಡ್‍ ಬಳಸುವ ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ಕೊಡುತ್ತಿದೆ. ಕೇವಲ ರಿಯಾಯಿತಿ ಅಷ್ಟೇ ಅಲ್ಲದೆ ಮತ್ತೊಂದು ಆಫರನ್ನೂ ಫ್ಲಿಪ್‍ಕಾರ್ಟ್ ಪ್ರಕಟಿಸಿದೆ.
 
ಈ ನಾಲ್ಕು ದಿನಗಳಲ್ಲಿ ಅತಿಹೆಚ್ಚಿನ ಮೊತ್ತದಲ್ಲಿ ಖರೀದಿಸಿದ ಹತ್ತು ಜೋಡಿಯನ್ನು ಆಯ್ಕ ಮಾಡಿ ಯೂರೋಪ್, ಶ್ರೀಲಂಕಾ, ಅಂಡಮಾನ್, ಮಾರಿಷಸ್, ಹಿಮಾಚಲ್ ಪ್ರದೇಶಗಳಿಗೆ ಹಾಲಿಡೆ ಟ್ರಿಪ್ ಕಳುಹಿಸಲಿದ್ದಾರೆ. 
 
ಫ್ಲಿಪ್‌ಕಾರ್ಟ್ ಯಾವುದೇ ರೀತಿಯ ಪ್ರಕಟಣೆ ಕೊಡದಿದ್ದರೂ ಮೋಟೋ ಇ3, ಸ್ಯಾಮ್‌ಸಂಗ್ ಗೇರ್ ಫಿಟ್ 2, ವಿಯೂ ಟಿವಿಗಳ ಮೇಲೆ ಡಿಸ್ಕೌಂಟ್ ಇರಲಿದೆಯಂತೆ. ಈಗಾಗಲೆ ಇರುವ ಫೋನ್‍ಗಳನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶವನ್ನೂ ಫ್ಲಿಪ್‍ಕಾರ್ಟ್ ಕೊಡುವ ಸಾಧ್ಯತೆ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :