Widgets Magazine

ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಬಿ ಎಸ್ ಎನ್ ಎಲ್ ನಿಂದ 499 ರೂ. ಹೊಸ ಆಫರ್

ಬೆಂಗಳೂರು| pavithra| Last Modified ಗುರುವಾರ, 26 ಜುಲೈ 2018 (11:41 IST)
ಬೆಂಗಳೂರು : ರಿಲಾಯನ್ಸ್ ಜಿಯೋ 509 ಪ್ಲಾನ್ ಗೆ ಟಕ್ಕರ್ ನೀಡಲು ಭಾರತ ಸಂಚಾರ ನಿಗಮ ನಿಯಮಿತ (ಬಿ ಎಸ್ ಎನ್ ಎಲ್) ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 499 ರೂಪಾಯಿ ಯೋಜನೆ ಶುರು ಮಾಡಿದೆ.


ಈ ಯೋಜನೆಯಲ್ಲಿ ಗ್ರಾಹಕರಿಗೆ 1 ತಿಂಗಳವರೆಗೆ 45 ಜಿಬಿ 3 ಜಿ ಡೇಟಾ ಸಿಗಲಿದೆ. ಅನಿಯಮಿತ ವಾಯ್ಸ್ ಕರೆ, 100 ಎಸ್‌ಎಂಎಸ್ ಸಿಗಲಿದೆ. 45 ಜಿಬಿ ಬಳಕೆ ನಂತರ, ಮೊಬೈಲ್ ಇಂಟರ್ನೆಟ್ ಸ್ಪೀಡ್ 40 ಕೆಬಿಪಿಎಸ್ ಆಗಲಿದೆ.


ಬಿಎಸ್‌ಎನ್ ಎಲ್ ಇತ್ತೀಚಿಗಷ್ಟೇ ದೀರ್ಘಾವದಿ ಪ್ಲಾನ್ ಶುರು ಮಾಡಿದೆ. 1,999 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 365 ದಿನಗಳವರೆಗೆ 2 ಜಿಬಿ 3 ಜಿ ಡೇಟಾ ಸಿಗಲಿದೆ. ಅನಿಯಮಿತ ಧ್ವನಿ ಕರೆ ಜೊತೆ 100 ಎಸ್ ಎಂ ಎಸ್ ಸಿಗಲಿದೆ. ಈ ಪ್ಲಾನ್ ನಲ್ಲಿ ಗ್ರಾಹಕರು ತಿಂಗಳಿಗೆ 167 ರೂಪಾಯಿ ಖರ್ಚು ಮಾಡಿದಂತಾಗುತ್ತದೆ. ಆದ್ರೆ ಈ ಪ್ಲಾನ್ ಚೆನ್ನೈ ಹಾಗೂ ತಮಿಳುನಾಡು ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :