ನವದೆಹಲಿ: ದೇಶದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಗಳಲ್ಲೊಂದಾದ ವೊಡಾಫೋನ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ನಾಲ್ಕು ಆಫರ್ ಗಳನ್ನು ನೀಡಿದೆ. ಈಗಾಗಲೇ ಇರುವ 509 ರೂ.ಗಳ ಯೋಜನೆಗೆ ಸಮನಾಗಿ ಈ ನಾಲ್ಕು ಆಫರ್ ಗಳನ್ನು ನೀಡಲಾಗಿದೆ. ಪ್ರಸಕ್ತಿ 509 ರೂ. ಪಾವತಿಸಿದರೆ ಪ್ರತಿದಿನ 1 ಜಿಬಿ ಡಾಟಾ, 100 ಎಸ್ ಎಂಎಸ್, ಹಾಗೂ ಉಚಿತ ಕರೆಗಳನ್ನು 84 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ.ಇದೇ ರೀತಿ ಇದೀಗ ಹೊಸದಾಗಿ ನಾಲ್ಕು ಆಫರ್ ನೀಡಿದೆ.