Widgets Magazine

ಗಾಯಕ್‌ವಾಡ್ ಎಫೆಕ್ಟ್: ಅಶಿಸ್ತಿನ ಪ್ರಯಾಣಿಕರಿಗೆ 15 ಲಕ್ಷ ದಂಡ ವಿಧಿಸಲಿರುವ ಏರ್ ಇಂಡಿಯಾ

ನವದೆಹಲಿ| Rajesh patil| Last Modified ಸೋಮವಾರ, 17 ಏಪ್ರಿಲ್ 2017 (20:18 IST)
ಅಶಿಸ್ತಿನ ಪ್ರಯಾಣಿಕರಿಗೆ ಶಾಸ್ತಿ ಮಾಡುವ ನಿಟ್ಟಿನಲ್ಲಿ ಸರಕಾರಿ ಸ್ವಾಮ್ಯದ ಏರಿಂಡಿಯಾ ಹೊಸ ನೀತಿ ಜಾರಿಗೆ ತಂದಿದೆ. ನೂತನ ನೀತಿ ಅನ್ವಯ ಅಶಿಸ್ತಿನ ಪ್ರಯಾಣಿಕರಿಂದ ವಿಮಾನ ಹಾರಾಟ ಎರಡು ಗಂಟೆಗಳವರೆಗೆ ವಿಳಂಬವಾದಲ್ಲಿ 15 ಲಕ್ಷ ರೂಪಾಯಿ ವಿಧಿಸಲಿದೆ.

ಇತ್ತೀಚೆಗೆ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ವಿಮಾನ ಪ್ರಯಾಣದಲ್ಲಿ ಸಿಬ್ಬಂದಿಗೆ ಚಪ್ಪಲಿ ಏಟು ಬಾರಿಸಿದ ಘಟನೆಯ ನಂತರ ಏರಿಂಡಿಯಾ ಹೊಸ ನಿಯಮ ಜಾರಿಗೆ ತಂದಿದೆ.

ಹೊಸ ನಿಯಮದ ಅನ್ವಯ ಅಶಿಸ್ತಿನ ಪ್ರಯಾಣಿಕರಿಂದ ವಿಮಾನ ಹಾರಾಟ ಒಂದು ಗಂಟೆಯಿಂದ ಎರಡು ಗಂಟೆಯವರೆಗೆ ವಿಳಂಬವಾದಲ್ಲಿ 5 ಲಕ್ಷ ರೂ.ದಂಡ ವಿಧಿಸಲಿದೆ. ಎರಡು ಗಂಟೆಗೂ ಹೆಚ್ಚು ಸಮಯ ವಿಳಂಬವಾದಲ್ಲಿ ಪ್ರಯಾಣಿಕರು 15 ಲಕ್ಷ ದಂಡ ತೆರಬೇಕಾಗುತ್ತದೆ.

ರವೀಂದ್ರ ಗಾಯಕ್‌ವಾಡ್ ಏರಿಂಡಿಯಾ ವಿಮಾನದಲ್ಲಿ ತೋರಿದ ಅಸಭ್ಯ ವರ್ತನೆಯ ಘಟನೆಯ ನಂತರ ಏರಿಂಡಿಯಾ ಸಂಸ್ಥೆ ಮತ್ತು ಕೇಂದ್ರ ಸರಕಾರ ಅಶಿಸ್ತಿನ ಪ್ರಯಾಣಿಕರಿಗೆ ಹೇಗೆ ಕಡಿವಾಣ ಹಾಕಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :