Widgets Magazine

ಗ್ಯಾಲಾಕ್ಸಿ ಎಸ್ 8 ಮಾರಾಟ ಏ.21ರಿಂದ ಆರಂಭ

New Delhi| Rajendra| Last Modified ಶನಿವಾರ, 25 ಫೆಬ್ರವರಿ 2017 (07:19 IST)
ಬ್ಯಾಟರಿ ದೋಷದ ಕಾರಣ ಮಾರುಕಟ್ಟೆಯಲ್ಲಿ ಸೋತ ಗ್ಯಾಲಾಕ್ಸಿ ಎಸ್ 8ನಿಂದ ಹೊರಬರಲು ಸ್ಯಾಮ್‍ಸಂಗ್ ಕಂಪೆನಿ ಮುಂದಾಗಿದೆ. ಇದೀಗ ಗ್ಯಾಲಕ್ಸಿ ಎಸ್ 8, ಎಸ್8+ ಸ್ಮಾರ್ಟ್‌ಫೋನ್‍ಗಳನ್ನು ಮಾ.29ರಂದು ಬಿಡುಗಡೆ ಮಾಡುತ್ತಿದೆ. ಮುಂದಿನ ತಿಂಗಳು ಲಾಂಚ್ ಮಾಡುತ್ತಿರುವ ಈ ಗ್ಯಾಲಕ್ಸಿ ಎಸ್ 8 ಮಾರಾಟವನ್ನು ಏ.21ರಿಂದ ಆರಂಭಿಸಲಿದೆ.

ಈ ಹಿಂದೆ ಏ.14ಕ್ಕೆ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆ ಪ್ರವೇಶಿಸಲಿದೆ ಎಂಬ ಸುದ್ದಿ ಇತ್ತು. ಆದರೆ ಕೆಲವು ದಿನಗಳ ಮಟ್ಟಿಗೆ ತಡವಾಗಿ ಮಾರುಕಟ್ಟೆ ಪ್ರವೇಶಿಸುತ್ತಿದೆ. ಎರಡು ಭಿನ್ನ ಸ್ಕ್ರೀನ್ ಗಾತ್ರಗಳಲ್ಲಿ (ಎಸ್8 ಮತ್ತು ಎಸ್8+) ಫೋನ್ ಲಭ್ಯವಾಗಲಿದೆ.

ಸ್ನ್ಯಾಪ್‍ಡ್ರ್ಯಾಗನ್ 835 ಪ್ರೋಸೆಸರ್, 6ಜಿಬಿ ರ‍್ಯಾಮ್ ಈ ಫೋನ್‌ಗಳಲ್ಲಿದೆ. ಡ್ಯುಯಲ್ ಹಿಂಬದಿ ಕ್ಯಾಮೆರಾ ವಿಶೇಷ ಆಕರ್ಷಣೆ ಎನ್ನಲಾಗಿದೆ. ಬಾರ್ಸಿಲೋನಾದಲ್ಲಿ ಈ ಫೋನ್ ಬಿಡುಗಡೆಯಾಗುತ್ತಿದೆ. ಮಾರ್ಚ್ 2ರಿಂದ ಮಾರ್ಚ್ 9ರವರೆಗೂ ರಿಜಿಸ್ಟ್ರೇಷನ್ ಇರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :