ಕೇವಲ 1700 ರೂ,ಗಳಿಗೆ ಐಫೋನ್ 7 ಖರೀದಿಸಬಹುದು: ಹೇಗೆ ಗೊತ್ತಾ?

ನವದೆಹಲಿ| Rajesh patil| Last Modified ಬುಧವಾರ, 14 ಸೆಪ್ಟಂಬರ್ 2016 (14:06 IST)
ಒಂದು ವೇಳೆ ಮಾಧ್ಯಮ ವರದಿಗಳನ್ನು ನೋಡಿದಲ್ಲಿ ಹಬ್ಬದ ಸೀಜನ್ ಗ್ರಾಹಕರಿಗೆ ಬಂಪರ ಕೊಡುಗೆಯಾಗಲಿದೆ ಎನ್ನುವದು ಕಂಡು ಬರುತ್ತಿದೆ.
ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಐಫೋನ್ ಬಳಸಬೇಕು ಎನ್ನುವ ಕ್ರೇಜ್ ಇದ್ದೇ ಇರುತ್ತದೆ. ಆದರೆ ದುಬಾರಿಯಾಗಿದ್ದರಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಖರೀದಿಸುವ ಆಸೆಗೆ ತಣ್ಣೀರು ಎರಚಿದಂತಾಗುತ್ತದೆ.
ವರದಿಗಳ ಪ್ರಕಾರ, ಒಂದು ವೇಳೆ ನಿಮ್ಮ ಬಳಿ ಆಧಾರ ಕಾರ್ಡ್ ಇದ್ದಲ್ಲಿ 1700 ರೂಪಾಯಿಗಳ ಮಾಸಿಕ ಕಂತುಗಳೊಂದಿಗೆ ಐಫೋನ್ 7 ಖರೀದಿಸಬಹುದಾಗಿದೆ.
ಆಪಲ್ ಸಂಸ್ಥೆ ಸ್ಕೀಮ್ ಲಾಭ-ನಷ್ಟದ ಬಗ್ಗೆ ಭಾರತೀಯ ಬ್ಯಾಂಕ್‌ಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.ಆಪಲ್ ಆಕಾಂಕ್ಷಿಗಳು ಅಕ್ಟೋಬರ್ 7 ರಿಂದ ಲೇಟೇಸ್ಟ್ ಐಫೋನ್ 7 ಖರೀದಿಸಬಹುದಾಗಿದೆ.ಕಳೆದ ವಾರ ಸಾನ್‌ ಫ್ರಾನ್ಸಿಸ್ಕೋ ನಗರದಲ್ಲಿ ಆಪಲ್ ಸಂಸ್ಥೆ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :