ದೈತ್ಯ ಸಾಮಾಜಿಕ ಜಾಲತಾಣ ಫೇಸ್ಬುಕ್ ಆಂಡ್ರಾಯ್ಡ್ ಮೆಸೆಂಜರ್ ಸೇವೆಯಲ್ಲಿ ಎಸ್ಎಮ್ಎಸ್ ಸೌಲಭ್ಯವನ್ನು ಸಕ್ರಿಯಗೊಳಿಸಿದೆ. ಇದೀಗ ಬಳಕೆದಾರರು ಸಂದೇಶ ಕಳುಹಿಸುವುದು ಮತ್ತು ಪಡೆಯಬಹುದಾಗಿದೆ. ಈ ಸೌಲಭ್ಯ ಕೇವಲ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದ್ದು, ನೀವು ಕಳುಹಿಸುವ ಸಂದೇಶವನ್ನು ಸ್ಪೀಕರಿಸುವವರು ಯಾವುದೇ ಸ್ಥಳದಲ್ಲಿದ್ದರೂ ನೀವು ಸಂದೇಶವನ್ನು ರವಾನಿಸಬಹುದಾಗಿದೆ. ಈ ಹೊಸ ಆಯ್ಕೆಯಿಂದಾಗಿ ಬಳಕೆದಾರರು ಒಂದು ಕಡೆ ಎಲ್ಲಾ ಸಂದೇಶಗಳನ್ನು ಪಡೆಯಬಹುದಾಗಿದೆ. ಸಂಭಾಷಣೆ ನಡೆಸುವುದು ಕೂಡಾ ಮತ್ತಷ್ಟು ಸರಳವಾಗಿದೆ ಎಂದು ಫೇಸ್ಬುಕ್ ಹೇಳಿಕೊಂಡಿದೆ.