Widgets Magazine

ರೂ.30 ಸಾವಿರ ತಲುಪಿದ ಬಂಗಾರದ ಬೆಲೆ

Mumbai| Rajendra| Last Modified ಶನಿವಾರ, 4 ಮಾರ್ಚ್ 2017 (22:33 IST)
ದೇಶೀಯ ಮತ್ತು ಅಂತಾರಾಷ್ಟ್ರೀಯವಾಗಿ ಬೇಡಿಕೆ ಇಲ್ಲದ ಕಾರಣ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಳಿಮುಖವಾಗಿದ್ದು ಗೊತ್ತೇ ಇದೆ. ಆದರೆ ಇಂದು ಬಂಗಾರದ ಬೆಲೆ ಮತ್ತೆ ಗಗನಕ್ಕೇರಿದೆ. 10 ಗ್ರಾಂ ಶುದ್ಧಬಂಗಾರ ರೂ.375ರಷ್ಟು ಏರಿಕೆಯಾಗಿ ರೂ.30 ಸಾವಿರ ಗಡಿ ದಾಟಿದೆ.

ಶನಿವಾರದ ವೇಳೆಗೆ ಟ್ರೇಡಿಂಗ್‍ನಲ್ಲಿ ಶೇ.99.9ರಷ್ಟು ಶುದ್ಧ ಚಿನ್ನ 10 ಗ್ರಾಂಗೆ ಒಂದು ಹಂತದಲ್ಲಿ ರೂ.30,100ಕ್ಕೆ ತಲುಪಿತು. ಆಭರಣ ತಯಾರಕರಿಂದ ಅಲ್ಲದೆ ಅಂತಾರಾಷ್ಟ್ರೀಯವಾಗಿಯೂ ಬೇಡಿಕೆ ಇರುವ ಕಾರಣ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಚಿನಿವಾರಪೇಟೆ ಟ್ರೇಡಿಂಗ್ ಮೂಲಗಳು ತಿಳಿಸಿವೆ.

ಇನ್ನೊಂದು ಕಡೆ ಬೆಳ್ಳಿ ಬೆಲೆಯೂ ಹೆಚ್ಚಾಗಿದೆ. ಕಿಲೋ ಬೆಳ್ಳಿ ರೂ.400ರಷ್ಟು ಹೆಚ್ಚಾಗಿ ರೂ.43,100ಕ್ಕೆ ತಲುಪಿದೆ. ಉದ್ಯಮಗಳು, ನಾಣ್ಯ ತಯಾರಕರಿಂದ ಉತ್ತಮ ಬೇಡಿಕೆ ಇರುವ ಕಾರಣ ಬೆಳ್ಳಿ ಬೆಲೆ ಹೆಚ್ಚಳಕ್ಕೆ ಕಾರಣ. ಅಂತಾರಾಷ್ಟ್ರೀಯವಾಗಿ ಶೇ.0.02 ರಷ್ಟು ಹೆಚ್ಚಳವಾದ ಔನ್ಸ್ ಬಂಗಾರ ಬೆಲೆ 1,234.40 ಡಾಲರಿಗೆ, ಬೆಳ್ಳಿ ಬೆಲೆ ಶೇ.1.27ರಷ್ಟು ಹೆಚ್ಚಾಗಿ 17.95 ಡಾಲರ್‌ ತಲುಪಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :