ಬಂಗಾರ ಬೆಲೆ ಮತ್ತಷ್ಟು ಕಡಿಮೆಯಾಗಿದೆ. ಸೋಮವಾರದ ವಹಿವಾಟಿನಲ್ಲಿ ರೂ.250ರಷ್ಟು ಕಡಿಮೆಯಾಗುವ ಮೂಲಕ 11 ತಿಂಗಳ ಕನಿಷ್ಥ ಸ್ಥಾನಕ್ಕೆ ಇಳಿದಿದೆ. 10 ಗ್ರಾಂಗಳ ಸ್ವಚ್ಛವಾದ ಚಿನ್ನ ರೂ.27,550 ಬೆಲೆಗೆ ಬಿಕರಿಯಾಗಿದೆ. ಆಭರಣ ತಯಾರಿಕೆದಾರರಿಂದ, ವ್ಯಾಪಾರಸ್ಥರಿಂದ ಖರೀದಿ ಕಡಿಮೆಯಾಗಿರುವುದು, ಭವಿಷ್ಯ ವಹಿವಾಟಿನಲ್ಲಿ ಕಡಿಮೆ ದರ ನಿಗದಿಯಾಗಿವುದು ಹಳದಿ ಲೋಹದ ಬೆಲೆ ಇಳಿಕೆಗೆ ಕಾರಣ ಎಂದು ಚಿನಿವಾರಪೇಟೆ ಮೂಲಗಳು ತಿಳಿಸಿವೆ. ಇನ್ನೊಂದು ಕಡೆ ಬೆಳ್ಳಿಯ ಬೆಲೆಯೂ ಕಡಿಮೆಯಾಗಿದೆ. ಒಂದು ಕೆ.ಜಿ ಬೆಳ್ಳಿ ರೂ.210