ನವದೆಹಲಿ : ಕೇಂದ್ರ ಸರ್ಕಾರ ಗೃಹೋಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ ದರ ಇಳಿಕೆ ಮಾಡಿದ್ದು, ಜಿಎಸ್ ಟಿ ಪರಿಷ್ಕೃತ ದರಗಳು ಶುಕ್ರವಾರದಿಂದ ಜಾರಿಗೆ ಬಂದಿವೆ. ಫ್ರಿಡ್ಜ್, ಸಣ್ಣ ಪರದೆಯ ಟಿವಿ, ವಾಷಿಂಗ್ ಮೆಷಿನ್, ಫುಟ್ ವೇರ್ ಮತ್ತಿತರ ಉತ್ಪನ್ನಗಳ ಮೇಲಿನ ಜಿ.ಎಸ್.ಟಿ ದರಗಳು ಕನಿಷ್ಠ 7 ರಿಂದ 10 ರಷ್ಟು ಕಡಿತವಾಗಿದೆ. ಎಲೆಕ್ಟ್ರಾನಿಕ್ಸ್ ವಲಯದ ಪ್ರಮುಖ ಕಂಪನಿಯಾದ ಸ್ಯಾಮ್ಸಂಗ್, ಟಿ.ವಿ, ಫ್ರಿಡ್ಜ್, ವಾಷಿಂಗ್ ಮಶೀನ್ ದರಗಳನ್ನು ಶೇ.8ರಷ್ಟು ಇಳಿಕೆ ಮಾಡಿದೆ.