Widgets Magazine

ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್; ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 4 ಫೋನ್ ಬೆಲೆಯಲ್ಲಿ ಇಳಿಕೆ

ಬೆಂಗಳೂರು| pavithra| Last Modified ಗುರುವಾರ, 19 ಜುಲೈ 2018 (12:36 IST)
ಬೆಂಗಳೂರು : ಮೊಬೈಲ್ ಪ್ರಿಯರಿಗೊಂದು ಸಂತಸದ ಸುದ್ದಿ. ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 4 ಫೋನ್ ಬೆಲೆ ಇದೀಗ ಕಡಿಮೆಯಾಗಿದೆ.


ಜೂನ್ ನಲ್ಲಿ ಬಿಡುಗಡೆಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 4 ಮೊಬೈಲ್ ಬೆಲೆ 9,990 ರೂಪಾಯಿಯಿತ್ತು. ಆದರೆ ಈಗ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ4 ನ 2ಜಿಬಿ ರ್ಯಾಮ್ ಹಾಗೂ 16ಜಿಬಿ ಸ್ಟೋರೇಜ್ ಫೋನ್ ಭಾರತದಲ್ಲಿ ಇನ್ಮುಂದೆ 9,490ರೂ.ಗೆ ಗ್ರಾಹಕರಿಗೆ ಸಿಗಲಿದೆ. ಹಾಗೇ 3ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೋರೇಜ್ ಮೊಬೈಲ್ ಈಗ 11,990ರೂಪಾಯಿಯಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 4 ಫೋನ್ ಸ್ವಯಂಚಾಲಿತವಾಗಿ ವೈ-ಫೈ ಆನ್-ಆಫ್ ಮಾಡುತ್ತದೆ. 13 ಮೆಗಾಪಿಕ್ಸಲ್ ರಿಯಲ್ ಕ್ಯಾಮರಾ ಹಾಗೂ 5 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ನೀಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :