ನವದೆಹಲಿ : ವಾಹನ ಸವಾರರಿಗೆ ಸಿಹಿಸುದ್ದಿ, ಇಂದು ಪೆಟ್ರೋಲ್ ಡಿಸೇಲ್ ಬೆಲೆ 15 ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 20 ಪೈಸೆ ಇಳಿಕೆಯಾಗಿದೆ. ಅದರಂತೆ ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 73.04 ರೂ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 66.09 ರೂ. ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 78.69 ರೂ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 69.27 ರೂ.