ಆಪೆಲ್, ಸ್ಯಾಮ್ಸಂಗ್ ಕಂಪೆನಿಗಳಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಬಂದ ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ ಮೇಲೆ ಫ್ಲಿಪ್ಕಾರ್ಟ್ ಭಾರಿ ರಿಯಾಯಿತಿ ಘೋಷಿಸಿದೆ. ಸುಮಾರು ರೂ.26 ಸಾವಿರದಷ್ಟು ದರ ಕಡಿಮೆ ಮಾಡಿದೆ. 32 ಜಿಗಿ ವೇರಿಯಂಟ್ ಬೆಲೆ ರೂ.57 ಸಾವಿರ ಇದ್ದು, ರಿಯಾಯಿತಿ ಮೂಲಕ ರೂ.28 ಸಾವಿರಕ್ಕೇ ಫೋನ್ ಸಿಗಲಿದೆ ಎಂದು ಫ್ಲಿಪ್ಕಾರ್ಟ್ ತಿಳಿಸಿದೆ. ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಎಕ್ಸೇಂಜ್ ಆಫರ್ ಮೂಲಕ ಫೋನ್ ಕೊಂಡುಕೊಳ್ಳುವವರಿಗೆ ಈ ಆಫರ್ ಅನ್ವಯಿಸಲಿದೆ. ಕ್ರೆಡಿಟ್