Widgets Magazine

ಸೆಬಿ ಮುಖ್ಯಸ್ಥರಾಗಿ ಅಜಯ್ ತ್ಯಾಗಿ ನೇಮಕ

Mumbai| Rajendra| Last Modified ಶನಿವಾರ, 11 ಫೆಬ್ರವರಿ 2017 (08:45 IST)
ಮಾರುಕಟ್ಟೆ ನಿಯಂತ್ರಣ ಸಂಸ್ಥೆ (ಸೆಬಿ) ನೂತನ ಅಧ್ಯಕ್ಷರಾಗಿ ಆರ್ಥಿಕ ಶಾಖೆಯ ಹಿರಿಯ ಅಧಿಕಾರಿ ಅಜಯ್ ತ್ಯಾಗಿ ನೇಮಕವಾಗಿದ್ದಾರೆ. ಈ ಮೇರೆಗೆ ಸರಕಾರ ಅಧಿಕೃತ ಪ್ರಕಟಣೆ ನೀಡಿದೆ. ತ್ಯಾಗಿ ಪ್ರಸ್ತುತ ಆರ್ಥಿಕ ವ್ಯವಹಾರಗಳ ಶಾಖೆ (ಬಂಡವಾಳ ಹೂಡಿಕೆ) ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಿಮಾಚಲ ಮೂಲದ ಐಎಎಸ್ ಅಧಿಕಾರಿ ತ್ಯಾಗಿ ರಿಜರ್ವ್ ಬ್ಯಾಂಕ್ ಮಂಡಳಿಯಲ್ಲೂ ಕೆಲವು ದಿನಗಳ ಕಾಲ ಕೆಲಸ ಮಾಡಿದ್ದಾರೆ. ಯು ಕೆ ಸಿನ್ಹಾ ಅವರ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ತ್ಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 2011ರ ಫೆಬ್ರವರಿ 18ರಂದು ಸೆಬಿ ಮುಖ್ಯಸ್ಥರಾಗಿ ನೇಮಕವಾಗಿದ್ದ ಸಿನ್ಹಾ ಮೂರು ವರ್ಷಗಳ ಕಾಲ ಪದವಿ ನಿರ್ವಹಿಸಿದ್ದಾರೆ.

ಆ ಬಳಿಕ ಸಿನ್ಹಾ ಅವರ ಪದವಿ ಕಾಲವನ್ನು ಮತ್ತೆರಡು ವರ್ಷಗಳ ಕಾಲ ವಿಸ್ತರಿಸಿದರು. ಕಳೆದ ವರ್ಷ ಫೆಬ್ರವರಿಯಲ್ಲಿ ಅವರ ಪದವಿ ಕಾಲ ಮುಗಿದಾಗ ಮತ್ತೊಮ್ಮೆ ವಿಸ್ತರಿಸುವ ಮೂಲಕ ಈ ವರ್ಷವೂ ಮುಂದುವರೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :