ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸ್ಮಾರ್ಟ್ವಾಚುಗಳ ಬರಾಟೆ ಜೋರಾಗಿದ್ದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ ಎಂದೇ ಹೇಳಬಹುದು. ಈ ಎಲ್ಲಾ ಸ್ಮಾರ್ಟ್ವಾಚುಗಳು ಸ್ಮಾರ್ಟ್ಫೋನ್ಗಳಿಗೆ ಬೆಂಬಲವಾಗಿದ್ದು ಇದೀಗ ಈ ಸ್ಮಾರ್ಟ್ವಾಚ್ ತಂತ್ರಜ್ಞಾನದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದರೆ ತಪ್ಪಾಗಲಾರದು. ಈ ಸ್ಮಾರ್ಟ್ವಾಚುಗಳನ್ನು ಮೊಬೈಲ್ನೊಂದಿಗೆ ಸಂಪರ್ಕ ಹೊಂದಿಸಬಹುದಾಗಿದ್ದು, ಮೊಬೈಲ್ನಲ್ಲಿ ಬರುವ ಕರೆಗಳು ಸಂದೇಶಗಳು ಮುಂತಾದವುಗಳನ್ನು ಈ ಸ್ಮಾರ್ಟ್ವಾಚ್ನಲ್ಲಿ ನಾವು ಕಾಣಬಹುದಾಗಿತ್ತು. ಆದರೆ ಇದೀಗ ಸ್ಮಾರ್ಟ್ವಾಚ್ ಮಾರಾಟದಲ್ಲಿ ಪೈಫೋಟಿ ಹೆಚ್ಚಾಗಿದ್ದು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ